ದುಬೈ: ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಮತ್ತು ಸಿರಾಜುಲ್ ಹುದಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೂ ಆದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರ ಉಪನ್ಯಾಸವು ಇಸ್ಲಾಮಿಕ್ ಚಾರಿಟೇಬಲ್ ಆ್ಯಂಡ್ ಅಫೇರ್ಸ್ ಇಲಾಖೆಯ “ಮುಲ್ತಖಾ ರಾಶೀದ್ ಬಿನ್ ಮುಹಮ್ಮದ್” ಕಾರ್ಯಕ್ರಮದಲ್ಲಿ ಶುಕ್ರವಾರ ನಡೆಯಲಿದೆ. ಇಶಾ ಪ್ರಾರ್ಥನೆಯ ಬಳಿಕ ಖಿಸೈಸ್‌ನ ತವಾರ್ ಸೆಂಟರ್ ನ ಮುಂದುಗಡೆ ಇರುವ ಮುಹಮ್ಮದ್ ಹಸನ್ ಶೈಖ್‌ನಲ್ಲಿ ಭಾಷಣ ನಡೆಯಲಿದೆ.
ಮುಲ್ತಖಾ ರಾಶಿದ್ ಬಿನ್ ಮುಹಮ್ಮದ್ ಕಾರ್ಯಕ್ರಮ ಎಂಬುದು ದುಬೈ ಧಾರ್ಮಿಕ ವ್ಯವಹಾರಗಳ ಇಲಾಖೆ(ಅವ್ಖಾಫ್) ಯ ವಿಶೇಷ ಕಾರ್ಯಕ್ರಮವಾಗಿದ್ದು, ಇಸ್ಲಾಮಿಕ್ ಉಪನ್ಯಾಸ ನೀಡುವವರ ಪೈಕಿ ಅಗ್ರಗಣ್ಯರಾದ ಪೇರೋಡ್ ಉಸ್ತಾದರು ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ವೇದಿಕೆಗಳಲ್ಲಿ ಪ್ರವಚನ ನೀಡಿದವರಾಗಿದ್ದಾರೆ.
ಹಿಂದಿನ ವರ್ಷಗಳಲ್ಲಿ, ಯುಎಇ ಅಧ್ಯಕ್ಷರ ರಮಝಾನ್ ಅತಿಥಿಯಾಗಿ ಭಾಗವಹಿಸಿದ್ದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರು, ದುಬೈ ಅಂತಾರಾಷ್ಟ್ರೀಯ ಪವಿತ್ರ ಖುರ್‌ಆನ್ ಪ್ರಶಸ್ತಿ ಸಮಿತಿಯ ಪ್ರತಿನಿಧಿಯಾಗಿಯೂ ಭಾಗವಹಿಸಿದ್ದರು.
ಬಸ್ ರೂಟ್:
ದುಬೈ ಆರ್‌ಟಿಎ ದ 31, 13, 64 ಸಂಖ್ಯೆಯ ಬಸ್‌ಗಳು ಮತ್ತು ಮೆಟ್ರೋ ಗ್ರೀನ್ ಲೈನ್‌ನ ಖಿಸೈಸ್ ನಿಲ್ದಾಣದಲ್ಲಿ ಇಳಿಯುವ ಮೂಲಕ ಉಪನ್ಯಾಸ ವೇದಿಕೆಯನ್ನು ತಲುಪಬಹುದಾಗಿದೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ