janadhvani

Kannada Online News Paper

ದುಬೈ ಅವ್’ಖಾಫ್ ನ ಕಾರ್ಯಕ್ರಮದಲ್ಲಿ ಶುಕ್ರವಾರ ಪೇರೋಡ್ ಉಸ್ತಾದ್ ಉಪನ್ಯಾಸ

ದುಬೈ: ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಮತ್ತು ಸಿರಾಜುಲ್ ಹುದಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೂ ಆದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರ ಉಪನ್ಯಾಸವು ಇಸ್ಲಾಮಿಕ್ ಚಾರಿಟೇಬಲ್ ಆ್ಯಂಡ್ ಅಫೇರ್ಸ್ ಇಲಾಖೆಯ “ಮುಲ್ತಖಾ ರಾಶೀದ್ ಬಿನ್ ಮುಹಮ್ಮದ್” ಕಾರ್ಯಕ್ರಮದಲ್ಲಿ ಶುಕ್ರವಾರ ನಡೆಯಲಿದೆ. ಇಶಾ ಪ್ರಾರ್ಥನೆಯ ಬಳಿಕ ಖಿಸೈಸ್‌ನ ತವಾರ್ ಸೆಂಟರ್ ‌ನ ಮುಂದುಗಡೆ ಇರುವ ಮುಹಮ್ಮದ್ ಹಸನ್ ಶೈಖ್‌ನಲ್ಲಿ ಭಾಷಣ ನಡೆಯಲಿದೆ.

ಮುಲ್ತಖಾ ರಾಶಿದ್ ಬಿನ್ ಮುಹಮ್ಮದ್ ಕಾರ್ಯಕ್ರಮ ಎಂಬುದು ದುಬೈ ಧಾರ್ಮಿಕ ವ್ಯವಹಾರಗಳ ಇಲಾಖೆ(ಅವ್ಖಾಫ್) ಯ ವಿಶೇಷ ಕಾರ್ಯಕ್ರಮವಾಗಿದ್ದು, ಇಸ್ಲಾಮಿಕ್ ಉಪನ್ಯಾಸ ನೀಡುವವರ ಪೈಕಿ ಅಗ್ರಗಣ್ಯರಾದ ಪೇರೋಡ್ ಉಸ್ತಾದರು ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ವೇದಿಕೆಗಳಲ್ಲಿ ಪ್ರವಚನ ನೀಡಿದವರಾಗಿದ್ದಾರೆ.

ಹಿಂದಿನ ವರ್ಷಗಳಲ್ಲಿ, ಯುಎಇ ಅಧ್ಯಕ್ಷರ ರಮಝಾನ್ ಅತಿಥಿಯಾಗಿ ಭಾಗವಹಿಸಿದ್ದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರು, ದುಬೈ ಅಂತಾರಾಷ್ಟ್ರೀಯ ಪವಿತ್ರ ಖುರ್‌ಆನ್ ಪ್ರಶಸ್ತಿ ಸಮಿತಿಯ ಪ್ರತಿನಿಧಿಯಾಗಿಯೂ ಭಾಗವಹಿಸಿದ್ದರು.

ಬಸ್ ರೂಟ್:

ದುಬೈ ಆರ್‌ಟಿಎ ದ 31, 13, 64 ಸಂಖ್ಯೆಯ ಬಸ್‌ಗಳು ಮತ್ತು ಮೆಟ್ರೋ ಗ್ರೀನ್ ಲೈನ್‌ನ ಖಿಸೈಸ್ ನಿಲ್ದಾಣದಲ್ಲಿ ಇಳಿಯುವ ಮೂಲಕ ಉಪನ್ಯಾಸ ವೇದಿಕೆಯನ್ನು ತಲುಪಬಹುದಾಗಿದೆ.

error: Content is protected !! Not allowed copy content from janadhvani.com