ಬೆಂಗಳೂರು: ದೇಶದ ರಕ್ಷಣೆಗೆ ಬೆನ್ನೆಲುಬಾಗಿ ನಿಂತಿರುವ ನಮ್ಮ ಹೆಮ್ಮೆಯ ಅಮಾಯಕ ವೀರ ಸೈನಿಕರ ಮೇಲೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು, 40ಕ್ಕೂ ಹೆಚ್ಚು ವೀರ ಯೋಧರು ಹುತಾತ್ಮರಾಗಿರುವುದು ಖೇದಕರ ಹಾಗೂ ವಿಷಾಧನೀಯ.ಈ ದುಷ್ಕೃತ್ಯ ಅತ್ಯಂತ ಪೈಶಾಚಿಕವಾಗಿದ್ದು ಸುನ್ನೀ ಲೇಖಕರ ಬಳಗ ವಾಟ್ಸಾಪ್ ಗ್ರೂಪ್ ಇದನ್ನು ತೀವ್ರವಾಗಿ ಖಂಡಿಸುತ್ತಿದೆ.
ದೇಶವನ್ನು ವಿಭಜಿಸುವುದು ಲಜ್ಜೆಗೆಟ್ಟ ಭಯೋತ್ಪಾದಕರ ಉದ್ದೇಶವಾಗಿದೆ, ಇಂಥಹ ಕ್ರೂರ ಕೃತ್ಯವನ್ನು ನಾವು ಮರೆಯಲು ಸಾಧ್ಯವಿಲ್ಲ,ಯಾವುದೇ ದುಷ್ಟಶಕ್ತಿಯಿಂದಲೂ ಭಾರತೀಯರನ್ನು ಹತ್ತಿಕ್ಕಲು ಸಾಧ್ಯವಿಲ್ಲ.ನರ ರಾಕ್ಷಸ ಭಯೋತ್ಪಾದಕರ ಇಂತಹ ಕುಕೃತ್ಯಗಳಿಂದ ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ಕಿಂಚಿತ್ತೂ ಕುಗ್ಗಿಸಲು ಸಾಧ್ಯವಿಲ್ಲ.
ವೀರಮರಣ ವರಿಸಿದ ಸಿಆರ್‌ಪಿಎಫ್ ಯೋಧರ ಪರಮೋನ್ನತ ಬಲಿದಾನವನ್ನು ದೇಶವು ಮರೆಯಲಾರದು, ಅವರ ತ್ಯಾಗವು ವ್ಯರ್ಥವಾಗದು, ದೇಶಕ್ಕಾಗಿ ಹುತಾತ್ಮರಾದ ವೀರಯೋಧರಿಗೆ ಚಿರಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ತಾಳ್ಮೆಯನ್ನು ಭಗವಂತನು ಕರುಣಿಸಲಿ ಎಂದು ಸುನ್ನೀ ಲೇಖಕರ ಬಳಗ ಹಾರೈಸಿದೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ