ರಿಯಾದ್: ರಿಯಾದಿನ ಜೆ ಆ್ಯಂಡ್ ಪಿ ಕಂಪನಿಯಲ್ಲಿರುವ ಭಾರತೀಯ ಕಾರ್ಮಿಕರ ಕೆಲಸದ ಬಗೆಗಿನ ಸಮಸ್ಯೆಗೆ ಪರಿಹಾರ ಕಾಣುವ ಸಲುವಾಗಿ ಕೇಂದ್ರ ವಿದೇಶಾಂಗ ಸಹ ಸಚಿವ ವಿ.ಕೆ.ಸಿಂಗ್ ರಿಯಾದ್ ತಲುಪಿದ್ದಾರೆ.
ಸೌದಿ ಅರೇಬಿಯಾದಲ್ಲಿನ ಭಾರತದ ರಾಯಭಾರಿ ಅಹ್ಮದ್ ಜಾವೇದ್, ಡಿಸಿಎಂ ಡಾ. ಹುಸೈನ್ ಅಜಾಝ್ ಖಾನ್ ಇತರ ಹಿರಿಯ ಅಧಿಕಾರಿಗಳು ಸೇರಿ ಸಚಿವರನ್ನು ಸ್ವೀಕರಿಸಿದರು.
ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಾಣುವ ಸಲುವಾಗಿ ಸಚಿವರು, ಸೌದಿ ಕಾರ್ಮಿಕ, ಸಾಮಾಜಿಕ ಸಚಿವ ಅಹ್ಮದ್ ಸುಲೈಮಾನ್ ಅಲ್ ರಾಜ್ಹಿ, ಗೃಹಖಾತೆಯ ಸಹಸಚಿವ ನಾಸರ್ ಬಿನ್ ಅಬ್ದುಲ್ ಅಝೀಝ್ ಜೊತೆ ಮಾತುಕತೆ ನಡೆಸಿದರು.
ಅಂಬಾಸಿಡರ್ ಅಹ್ಮದ್ ಜಾವಿದ್, ಡಾ. ಹುಸೈನ್ ಅಜಾಝ್ ಖಾನ್ ಸಭೆಯಲ್ಲಿ ಉಪಸ್ಥಿತರಿದ್ದರು.
ಲ್ಯಾಬ್ ಸಂದರ್ಶಿಸಿದ ಸಚಿವರು, ಕಾರ್ಮಿಕರಿಂದ ವಿವರಗಳನ್ನು ಪಡೆದರು. ಸಂಬಳ ಮತ್ತು ಕೆಲಸವೂ ಇಲ್ಲದೆ ಸುಮಾರು 800 ಕಾರ್ಮಿಕರು ಕ್ಯಾಂಪ್ನಲ್ಲಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಹೆಚ್ಚಿನವರ ಇಖಾಮಾ ಕಾಲಾವಧಿ ಮುಗಿದಿರುವ ಕಾರಣ ಊರಿಗೆ ಮರಳುವುದೂ ಕಷ್ಟಕರವಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಗೆ ಮಾಹಿತಿ ನೀಡಿದಾಗ ಅವರು, ಪ್ರತ್ಯೇಕ ನಿರ್ದೇಶನ ನೀಡಿ ಸಹ ಸಚಿವ ವಿ.ಕೆ.ಸಿಂಗ್ರನ್ನು ಸೌದಿ ಅರೇಬಿಯಾಗೆ ಕಳುಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ