janadhvani

Kannada Online News Paper

ಇಂಡಿಗೋ ಏರ್‌ಲೈನ್: ಕುವೈಟ್-ಕಣ್ಣೂರು ನೇರ ಹಾರಾಟ ಆರಂಭ

ಕುವೈಟ್: ಭಾರತೀಯ ಬಜೆಟ್ ಏರ್‌ಲೈನ್ ಕಂಪನಿಯಾದ ಇಂಡಿಗೊ ಕುವೈಟ್-ಕಣ್ಣೂರು ವಲಯದಲ್ಲಿ ನೇರ ಸೇವೆಯನ್ನು ಆರಂಭಿಸಲಿದೆ. ಮಾರ್ಚ್ ಹದಿನೈದರಿಂದ ಕಣ್ಣೂರ್ ನಿಂದ ಕುವೈತ್‌ಗೆ ಅದೇ ರೀತಿ ಕುವೈತ್‌ನಿಂದ ಕಣ್ಣೂರಿಗೂ ವಾರದಲ್ಲಿ ಆರು ದಿವಸ ನೇರ ವಿಮಾನಗಳು ಹಾರಾಡಲಿವೆ.

ಪ್ರಸ್ತುತ ಇಂಡಿಗೊ ಚೆನ್ನೈ ಮೂಲಕ ಕಣ್ಣೂರ್‌ಗೆ ಸಂಪರ್ಕ ಕಲ್ಪಿಸುತ್ತಿದೆ.ಮಂಗಳವಾರ ಹೊರತುಪಡಿಸಿ ವಾರದ ಆರು ದಿವಸಗಳಲ್ಲಿ ಬೆಳಗ್ಗೆ 5 ಗಂಟೆಗೆ ಕಣ್ಣೂರಿನಿಂದ ಹೊರಟು ಬೆಳಗ್ಗೆ 8 ಗಂಟೆಗೆ ಕುವೈತ್ ತಲುಪಲಿದ್ದು, ಕುವೈತ್ ‌ನಿಂದ ಬೆಳಗ್ಗೆ 9 ಗಂಟೆಗೆ ಹೊರಟು ಅದೇ ದಿನ ಸಂಜೆ 4 ಗಂಟೆಗೆ ಕಣ್ಣೂರು ತಲುಪಲಿದೆ. ಏಕ-ದಾರಿಗೆ 35 ಕುವೈಟ್ ದಿನಾರ್‌ ಶುಲ್ಕ ನಿರ್ಣಯಿಸಲಾಗಿದ್ದು, ಮಾರ್ಚ್ 15 ರಿಂದ ಸೇವೆ ಆರಂಭವಾಗಲಿದೆ.

ಕಣ್ಣೂರ್‌ಗೆ ನೇರ ಸೇವೆ ಮಲಬಾರ್ ಪ್ರದೇಶದ ಅನಿವಾಸಿಗರಿಗೆ ಸಹಾಯಕವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಕುವೈತ್ ತಲುಪುವ ಕಾರಣ ಪ್ರಯಾಣಿಕರ ಕೆಲಸದ ದಿನಗಳನ್ನು ಉಳಿಸಬಹುದಾಗಿದೆ. ಕಳೆದ ತಿಂಗಳು ಪ್ರಾರಂಭವಾದ ಕುವೈತ್ -ಚೆನ್ನೈ- ಕಣ್ಣೂರ್ ಸಂಪರ್ಕ ಸೇವೆಯನ್ನು ಅದೇ ರೀತಿ ಉಳಿಸಲಾಗಿದೆ. ಚೆನ್ನೈ ಹೊರತಾಗಿ ಇಂಡಿಗೊ ಕೊಚ್ಚಿ ಮತ್ತು ಅಹಮದಾಬಾದ್ ‌ಗೆ ನೇರ ಹಾರಾಟವನ್ನು ನಿರ್ವಹಿಸುತ್ತಿದೆ.

error: Content is protected !! Not allowed copy content from janadhvani.com