ಅಜ್ಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ರಾಷ್ಟ್ರೀಯ ಸಮಿತಿ ಅಜ್ಮಾನ್ ನಲ್ಲಿ ಹಮ್ಮಿಕೊಂಡ ಪ್ರತಿಭೋತ್ಸವ-2019 ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಸಾಲೆತೂರುರವರ ಪುತ್ರಿ ಆಯಿಷಾ ನೂರೈನ್2 ಪ್ರಥಮ ಸ್ಥಾನ ಗಳಿಸಿ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.ಸಬ್ ಜೂನಿಯರ್ ವಿಭಾಗದ ಹಾಡು ಮತ್ತು ಖಿರಾಅತಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಯು.ಎ.ಇ ಯ ಆರು ಎಮಿರೇಟ್ಸ್ ಗಳ 250 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಗಳನ್ನು ತೋರ್ಪಡಿಸಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಕೆ.ಸಿ.ಎಫ್ ಝೋನ್ ಮಟ್ಟದ ಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದು ಅರ್ಹವಾಗಿಯೇ ರಾಷ್ಟ್ರೀಯ ಪ್ರತಿಭೋತ್ಸವಕ್ಕೆ ಆಯ್ಕೆಗೊಂಡ ಆಯಿಷಾ ರಾಷ್ಟ್ರೀಯ ಪ್ರತಿಭೋತ್ಸವದಲ್ಲೂ ತನ್ನ ಅದ್ಭುತವಾದ ಪ್ರತಿಭೆಗಳ ಮೂಲಕ ಮಿಂಚಿ ಎರಡು ಪ್ರಥಮ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಕೆ.ಸಿ.ಎಫ್ ದುಬೈ ನಾರ್ತ್ ಝೋನ್ ನಿಂದ ಆಯ್ಕೆಯಾಗಿ ಬಂದಿರುವ ಆಯಿಷಾ ನೂರೈನ್ ಅಧ್ಭುತ ಪ್ರತಿಭೆ ಮತ್ತು ಕಲಿಕೆಯಲ್ಲೂ ಅಧ್ಯಾಪಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ದುಬೈ ಯಲ್ಲಿ ಉದ್ಯಮಿಯಾಗಿರುವ ಅಬ್ದುಲ್ ಖಾದರ್ ಸಾಲೆತ್ತೂರು ಕೆ.ಸಿ.ಎಫ್ ಸಕ್ರೀಯ ಕಾರ್ಯಕರ್ತರು ಮತ್ತು ಪ್ರತಿಭೋತ್ಸವ ಸಮಿತಿಯ ಚೇರ್ಮನ್ ಆಗಿಯೂ ಆಯ್ಕೆಯಾಗಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ