janadhvani

Kannada Online News Paper

ಬಜ್ಪೆ.ಡಿ,23: ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಷನ್ (ರಿ) ಪ್ರಾಯೋಜಕತ್ವದಲ್ಲಿ ಎ.ಜೆ ಹಾಸ್ಪಿಟಲ್ ಮಂಗಳೂರು ಇವರ ಸಹಕಾರದೊಂದಿಗೆ ದಿನಾಂಕ 23-12-2018 ರಂದು ಬೃಹತ್ ರಕ್ತದಾನ ಶಿಬಿರವು ಬಜ್ಪೆ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಳಗ್ಗೆ 9:30 ಕ್ಕೆ ಪ್ರಾರಂಭಗೊಂಡ ರಕ್ತದಾನ ಶಿಬಿರವು ಅಪರಾಹ್ನ 1 ಗಂಟೆಯವರೆಗೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಏ.ಕೆ ಅಶ್ರಫ್ ಜೋಕಟ್ಟೆ(ಪಿಎಫ್ಐ ರಾಜ್ಯ ಸಮಿತಿ ಸದಸ್ಯರು)ತನ್ನ ಅಧ್ಯಕ್ಷೀಯ ಭಾಷಣದಲ್ಲಿ ರಕ್ತದಾನದ ಮಹತ್ವದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ, ನಜೀರ್, ಆಯಿಷಾ, ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಷನ್ ನಿರ್ವಾಹಕರಾದ ಸಫ್ವಾನ್, ತಾಜುದ್ದಿನ್(ಉಪಾಧ್ಯಕ್ಷರು ಆಲ್ ಕಾಲೇಜು ಸ್ಟೂಡೆಂಟ್ ಯೂನಿಯನ್ ದ.ಕ), ರಫೀಕ್, ರಿಜ್ವಾನ್, ಶಾಫಿ, ರಾಹಿಲ್ ಸಲ್ಮಾನ್, ಕಲಂದರ್,ಶಿಯಾಬ್ ಮತ್ತಿತರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಮಾರು 86 ರಕ್ತದಾನಿಗಳು ರಕ್ತದಾನ ಮಾಡಿದರು.ಝಹಿಮ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

ವರದಿ:ಮಾಧ್ಯಮ ವಿಭಾಗ
ಕೊಂಚಾರ್ ಯೂತ್ ಕೌನ್ಸಿಲ್ಅಸೋಸಿಯೇಷನ್(ರಿ)

error: Content is protected !! Not allowed copy content from janadhvani.com