janadhvani

Kannada Online News Paper

ಕಕ್ಕಿಂಜೆಯ ಪುತ್ರ ಡಾ.ಝೈನಿ ಖಾಮಿಲ್ ಉಸ್ತಾದರಿಗೆ ಹುಟ್ಟೂರ ಗೌರವಾರ್ಪಣೆ

ಕಕ್ಕಿಂಜೆ: ಶ್ರೀಲಂಕಾದ ಓಪನ್ ಇಂಟರ್ ನ್ಯಾಶನಲ್ ಯುನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ ವಿವಿಯಿಂದ Phd ಪದವಿ ಪಡೆದ ಮರ್ಹೂಮ್ ಎಂ.ಎಸ್ ಮೂಸಾ ಮುಸ್ಲಿಯಾರ್ ಕಕ್ಕಿಂಜೆ ಯವರ ಪುತ್ರ ಕಕ್ಕಿಂಜೆ ಊರಿನ ಅಭಿಮಾನ ಡಾ. ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಕಕ್ಕಿಂಜೆ ಯವರಿಗೆ ಹುಟ್ಟೂರಾದ ಕಕ್ಕಿಂಜೆ SSF ಹಾಗೂ SYS ಶಾಖಾ ವತಿಯಿಂದ ಸನ್ಮಾನಿಸಲಾಯಿತು.ಕಕ್ಕಿಂಜೆ ಜಿ.ಕೆ ಮೋನು ಹಾಜಿಯವರ ಮನೆಯಲ್ಲಿ ವರ್ಷಂಪ್ರತಿ ನಡೆಸಿ ಬರುತ್ತಿರುವ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮದ‌ಲ್ಲಿ ಝೈನಿ ಉಸ್ತಾದರನ್ನು ಸನ್ಮಾನಿಸಿ ಗೌರವಿಸಲಾಯ್ತು.ಈ ಸಂದರ್ಭ SSF ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಕೆ.ಎಮ್ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಸಯ್ಯಿದ್ ತ್ವಾಹ ತಂಙಳ್ ಗಾಣೆಮಾರ್, ಕತ್ತಾರ್ ನ್ಯಾಷನಲ್ ಕೆಸಿಎಫ್ ಅಧ್ಯಕ್ಷರು ರಹೀಮ್ ಸಅದಿ, ಕೆ.ಎಮ್ ಮುಸ್ತಾಫ ಹಿಮಮಿ ನಈಮಿ ಮೋಂಟುಗೋಳಿ, ಹಾಗೂ ಕಕ್ಕಿಂಜೆ SSF SYS ನೇತಾರರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com