janadhvani

Kannada Online News Paper

ಸೂರಿಕುಮೇರು ಬದ್ರಿಯಾ ಮಸ್ಜಿದ್ ನಲ್ಲಿ ಸಂಭ್ರಮದ ಮೀಲಾದುನ್ನಬಿ

ಮಾಣಿ : ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಮೀಲಾದುನ್ನೆಭಿ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಯಿತು,ಮೊದಲ ದಿನ ದಫ್ ಪ್ರದರ್ಶನ ಹಾಗೂ ಖತೀಬ್ ಡಿ ಎಸ್ ಅಬ್ದುರ್ರಹ್ಮಾನ್ ಮದನಿಯವರ ಮತ ಪ್ರಭಾಷಣ,ಎರಡನೇ ದಿನ ಮಕ್ಕಳ ಮೀಲಾದುನ್ನೆಭಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಂಗಳವಾರ ಆಕರ್ಷಕ ಮೀಲಾದ್ ಜಾಥಾ ಸೂರಿಕುಮೇರು, ಮಾಣಿ,ದಾಸಕೋಡಿ,ಕಾಯರಡ್ಕ ಮೂಲಕ ಸಾಗಿ ಬದ್ರಿಯಾ ಮಸೀದಿಯಲ್ಲಿ ಸಮಾಪನಗೊಂಡಿತು,ಬಳಿಕ ನಡೆದ ಮೌಲಿದ್ ಮಜ್ಲಿಸ್ ನಲ್ಲಿ ಝೈನುಲ್ ಉಲಮಾ ಮಾಣಿ‌ ಉಸ್ತಾದ್ ನಸೀಅತ್ ಹಾಗೂ ದುಆ ನಡೆಸಿಕೊಟ್ಟರು, ಮುಹಮ್ಮದ್ ಅಲೀ ಮುಸ್ಲಿಯಾರ್ ಸ್ವಾಗತಿಸಿದರು, ಯೂಸುಫ್ ಹಾಜಿ ಧ್ವಜಾರೋಹಣಗೈದರು,
ಮೂಸಾ ಕರೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು, ರಫೀಕ್ ಮದನಿ ಪಾಟ್ರಕೋಡಿ, ಹಂಝ ಮದನಿ,ಅಬ್ದುರ್ರಹ್ಮಾನ್ ಪುತ್ತು,ಬಶೀರ್ ಗುಡ್ಡೆ,ಹಂಝ ಕಾಯರಡ್ಕ,ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು,ಬದ್ರಿಯಾ ಯಂಗ್ ಮೆನ್ಸ್ ಸೂರಿಕುಮೇರು, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಮಾಣಿ,ಗಲ್ಫ್ ಕಮಿಟಿ ಸೂರಿಕುಮೇರು,ಅಬ್ದುಲ್ ಅಝೀಝ್ ಕರಾವಳಿ ಚಿಕ್ಕಮಗಳೂರು,ಮುಂತಾದ ಸಂಘಟನೆಗಳು ಹಾಗೂ ಊರಿನ ಜಮಾಅತ್ ಕಮಿಟಿ ಕಾರ್ಯಕ್ರಮದಲ್ಲಿ ಸಹಕಾರ ನೀಡಿತ್ತು,ಅನ್ನದಾನ ಹಾಗೂ ತಬರ್ರುಕ್ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

error: Content is protected !! Not allowed copy content from janadhvani.com