janadhvani

Kannada Online News Paper

ಮಂಜನಾಡಿ: ಮರ್ಹಬಾ ಯಾ ಶಹ್’ರ ರಬೀಅ್-ವಿದ್ಯಾರ್ಥಿ ಜಾಥಾ

ಈ ವರದಿಯ ಧ್ವನಿಯನ್ನು ಆಲಿಸಿ


ಮಂಜನಾಡಿ :ಅಲ್ ಮದೀನ ಮಂಜನಾಡಿ ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ಕೊಂಡ ತಿಂಗಳ ಸಮಾಗತ ದಿನದಂದು ಮರ್ಹಬಾ ಯಾ ಶಹ್ ರ ರಬೀಅ್ ಎಂಬ ಶೀರ್ಷಿಕೆಯೊಂದಿಗೆ ವಿದ್ಯಾರ್ಥಿಗಳಿಂದ ಬಹೃತ್ ಜಾಥವನ್ನು ಏರ್ಪಡಿಸಲಾಯಿತು.

ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರ ಪ್ರಾರ್ಥನೆಗೈದು ಧ್ವಜ ಹಸ್ತಾಂತರ ನಡೆಸಿದರು. ಅಲ್ ಮದೀನ ಹಾಫಿಳ್ ಕಾಲೇಜಿನ ಪ್ರಾಂಶುಪಾಲರಾದ ಹಾಫಿಳ್ ಮರ್ಷದ್ ಹುಮೈದಿ, ಹಾಫಿಳ್
ಅಬ್ದುಲ್ ಅಝೀಝ್ ಹಿಮಮಿ, ಕಬೀರ್ ಸಅದಿ ವೇಣೂರ್, ಇಕ್ಬಾಲ್ ಮರ್ಝೂಖಿ ಸಖಾಫಿ, ಮತ್ತಿತರು ಉಪಸ್ಥಿತರಿದ್ದರು .

ಜಾಥದಲ್ಲಿ ಸಂದೇಶ ಭಾಷಣ ವನ್ನು ನೌಫಲ್ ಮಲಾರ್, ನಾಸಿರ್ ಸೋಮವಾರ ಪೇಟೆ, ಜಮೀರ್ ಚೆನೈ, ತಮೀಮ್ ವಿಟ್ಲ ರವರು ಮಾಡಿದರು.

ವಂಜನಾಡಿ ದರ್ಗಾ ಝಿಯಾರತ್ ಗೈದು ಮರಿಕ್ಕಳ ದಿಂದ ತೌಡುಗೋಳಿ ಕ್ರಾಸ್ ತನಕ ಆಕರ್ಷಣೀಯ ಸ್ಕೌಟ್ ಪ್ರದರ್ಶನ ದೊಂದಿಗೆ ಕಾಲ್ನಡಿಗೆ ಜಾಥ ನಡೆಸಿದರು‌.

ಜಾಥದಲ್ಲಿ ಸಅದ್ ಮೋಂಟುಗೋಳಿ ಸ್ವಾಗತಗೈದರು, ನೌಶಾದ್ ಕಲ್ಮಿಂಜ ವಂದಿಸಿದರು.

error: Content is protected !! Not allowed copy content from janadhvani.com