janadhvani

Kannada Online News Paper

ಕನೆಕ್ಟ್ 2018:ಸಾಮುದಾಯಿಕ ಸಮ್ಮಿಲನ ಯಶಸ್ವಿಗೆ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಕರೆ

ಬಂಟ್ವಾಳ:ಡಿಸೆಂಬರ್ 3 ರಂದು ನೆಹರೂ ಮೈದಾನದಲ್ಲಿ ನಡೆಯುವ ಆದರ್ಶ ವಿವಾಹ,ಮೀಲಾದ್ ಜಾಥಾ,ಗ್ರಾಂಡ್ ಹುಬ್ಬುರಸೂಲ್ ಕಾನ್ಫರೆನ್ಸ್ ಗಳನ್ನೊಂಡ ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನರವರ ಆಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಭೆಯಲ್ಲಿ ಕರೆ ನೀಡಲಾಯಿತು.

ಪ್ರತೀ ಡಿವಿಷನ್ ಗಳಲ್ಲಿ ಸಾಮುದಾಯಿಕ ಸಮ್ಮಿಳನದ ಪ್ರಚಾರಾರ್ಥ ಡಿವಿಷನ್ ಕನ್ವೆನ್ಷನ್ , ಬೈಕ್ ರ್ಯಾಲಿ ಹಾಗೂ ಡಿವಿಷನ್ ವ್ಯಾಪ್ತಿಯಲ್ಲಿ ವಾಹನ ಪ್ರಚಾರ ಮತ್ತು ಸೆಕ್ಟರ್ ,ಯೂನಿಟ್ ಗಳಲ್ಲಿ ಪ್ಲೆಕ್ಸ್ ಅಳವಡಿಸಿ ಪ್ರಚಾರ ನಡೆಸಲು ಸೂಚಿಸಲಾಯಿತು.

ಸಭೆಯಲ್ಲಿ ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ,ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ,ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮೊಡಂತ್ಯಾರ್,ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಉಪಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ,ಕೆ.ಎಂ.ಎಚ್ ಝುಹ್ರಿ ಕೊಂಬಾಳಿ,ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ,ಸದಸ್ಯರಾದ ಸಯ್ಯದ್ ಖುಬೈಬ್ ತಂಙಳ್,ಮುನೀರ್ ಸಖಾಫಿ ಉಳ್ಳಾಲ,ಹಾಫಿಳ್ ಮಜೀದ್ ಫಾಳಿಲಿ ಗಾಣೆಮಾರ್,ರಶೀದ್ ಹಾಜಿ ವಗ್ಗ,ಶಮೀರ್ ಸುಳ್ಯ,ಇಕ್ಬಾಲ್ ಮಂಗಳಪೇಟೆ,ರಫೀಕ್ ಸುರತ್ಕಲ್,ಜಬ್ಬಾರ್ ಕಣ್ಣೂರು,ಶರೀಫ್ ಸಖಾಫಿ ಕುಪ್ಪೆಟ್ಟಿ ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿ,ಕೊನೆಗೆ ವಂದಿಸಿದರು.

error: Content is protected !! Not allowed copy content from janadhvani.com