janadhvani

Kannada Online News Paper

CONNECT – 2018 ಇದರ ಪ್ರಚಾರರ್ಥವಾಗಿ KCF ಅಲ್ ಕಸೀಮ್ ಝೋನ್ ಸೌದಿ ಅರೇಬಿಯಾ ವತಿಯಿಂದ ಪೋಸ್ಟರ್ ಪ್ರದರ್ಶನ

ಬುರೈದ : ಮಂಗಳೂರು ನೆಹರು ಮೈದಾನದಲ್ಲಿ ಡಿಸಂಬರ್ 3 ರಂದು ನಡೆಯಲಿರುವ ಐತಿಹಾಸಿಕ ಸಾಮುದಾಯಿಕ ಸಮ್ಮಿಲನ CONNECT – 2018 ಇದರ ಪ್ರಚಾರರ್ಥವಾಗಿ KCF ಅಲ್ ಕಸೀಮ್ ಝೋನ್
ಸೌದಿ ಅರೇಬಿಯಾ ಇದರ ವತಿಯಿಂದ ಪೋಸ್ಟರ್ ಪ್ರದರ್ಶನವು ದಿನಾಂಕ 15-11-2018 ನೇ ಗುರುವಾರ ಬುರೈದ KCF ಕಚೇರಿಯಲ್ಲಿ ನಡೆಯಿತು. ಸಾಮುದಾಯಿಕ ಸಮ್ಮಿಲನದ ಕುರಿತು ವಿವರಣೆಯನ್ನು ಝೋನ್ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಸಭೆಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ಬುರೈದ ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ಕರೀಂ ಉಸ್ತಾದ್ ವಹಿಸಿದರು ಕಾರ್ಯಕ್ರಮದಲ್ಲಿ ಮರ್ಕಝುಲ್ ಹುದಾ ಕುಂಬ್ರ ಇದರ ರಿಸೀವರ್ ಶರೀಫ್ ಅಮಾನಿ ಝೋನ್ ರಿಲೀಫ್ ಚಯರ್ಮ್ಯಾನ್ ಮುಸ್ತಫಾ ಹಾಸನ ಹಾಗೂ ಬುರೈದ ಸೆಕ್ಟರ್ ನಾಯಕರು ಹಾಜರಿದ್ದರು. ಕಾರ್ಯಕ್ರಮವನ್ನು ಶರೀಫ್ B.H.ಸ್ವಾಗತಿಸಿ ತಾಜುದ್ದೀನ್ ಕೆಮ್ಮಾರ್ ಉದ್ಘಾಟನೆಗೊಳಿಸಿದರು ಕೊನೆಯಲ್ಲಿ ಅಬ್ದುಲ್ ಅಝೀಜ್ ಹನಾ ವಂದಿಸಿ ಮೂರು ಸ್ವಾಲಾತ್ ನೊಂದಿಗೆ ಕೋನೆಗೊಳಿಸಲಾಯಿತು.

error: Content is protected !! Not allowed copy content from janadhvani.com