ಮಾಣಿ : ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ ಡಿಸೆಂಬರ್ 8 ಶನಿವಾರದಂದು ಸತ್ತಿಕಲ್ ಮೈದಾನದಲ್ಲಿ ನಡೆಯಲಿರುವ ಬೃಹತ್ ಮೀಲಾದ್ ಕಾನ್ಫರೆನ್ಸ್ ನಲ್ಲಿ ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ,ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟನೆ ಮಾಡಲಿರುವ ಈ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಹಂಝ ಹಾದಿ ತಂಙಳ್ ಪಾಟ್ರಕೋಡಿ ದುಆ ಆಶೀರ್ವಚನ ನೀಡಲಿದ್ದಾರೆ,ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರಾಸ್ತಾವಿಕವಾಗಿ ಮಾತನಾಡಲಿರುವರು,ಜಿ ಎಂ ಕಾಮಿಲ್ ಸಖಾಫಿ ಸ್ವಾಗತ ಭಾಷಣ ಮಾಡುವರು,ಸಯ್ಯಿದ್ ತ್ವಾಹಾ ತಂಙಳ್ ನೇತೃತ್ವದಲ್ಲಿ ಆಕರ್ಷಕ ಬುರ್ದಾ ಮಜ್ಲಿಸ್ ನಡೆಯಲಿದ್ದು ಮಾಸ್ಟರ್ ಶಿಹಾನ್ ಉಳ್ಳಾಲ ನಅತ್ ನಡೆಸಿಕೊಡುವರು,ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲು,ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು, ಇಬ್ರಾಹಿಂ ಸಅದಿ ಮಾಣಿ,ಮುಹಮ್ಮದ್ ಶರೀಫ್ ಸಖಾಫಿ ಮಾಣಿ,ಸದಕತುಲ್ಲಾಹ್ ನದ್ವಿ ಮಾಣಿ,ರಶೀದ್ ಸಖಾಫಿ ಗಡಿಯಾರ್,ಹನೀಫ್ ಸಖಾಫಿ ಪೇರಮೊಗರು,ಹಾರಿಸ್ ಮದನಿ ಪಾಟ್ರಕೋಡಿ, ಬಶೀರ್ ಝುಹುರಿ ಸೂರಿಕುಮೇರು, ಅಶ್ರಫ್ ಸಖಾಫಿ ಸೂರಿಕುಮೇರು, ನಝೀರ್ ಅಮ್ಜದಿ ಸರಳಿಕಟ್ಟೆ,ಯಾಕೂಬ್ ಸಅದಿ ಅಲ್ ಅಫ್ಳಲಿ ಪಾಣಾಜೆ,ಮುಂತಾದ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿರುವರು ಎಂದು ಸೆಕ್ಟರ್ ನಾಯಕರಾದ ಹಾಫಿಳ್ ತೌಸೀಫ್ ಕೆಮ್ಮಾನ್, ಮುಸ್ತಫಾ ಬುಡೋಳಿ,ಸ್ವಾದಿಖ್ ಮುಈನೀ ಸಖಾಫಿ, ಕಲಂದರ್ ಶೇರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.