ಚಿಕ್ಕಮಗಳೂರು, ಅ: 28: ಅತೀ ಬೇಗನೇ ಮುಗಿಯಲಿಕ್ಕಿರುವ ಯೌವ್ವನ ವನ್ನು ಕೆಡುಕಿಗೆ ಬಲಿಯಾಗದೆ ಒಳಿತಿಗಾಗಿ ಮಾತ್ರ ಬಳಸಬೇಕು, ಆ ಮೂಲಕ ಜೀವನ ಧನ್ಯವಾಗಲಿದೆ ಎಂದು ಖ್ಯಾತ ಯುವ ವಿದ್ವಾಂಸ ಮೌಲಾನಾ ಹುಸೈನ್ ಸಅದಿ ಹೊಸ್ಮಾರು ಇಂದಿಲ್ಲಿ ಹೇಳಿದರು.
ಚಿಕ್ಕಮಗಳೂರು ಅಲ್ ಬದ್ರಿಯ್ಯ ಯುನಿಟ್ ಕಾನ್ಫರೆನ್ಸ್ ನ್ನು ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು.
ಅಸ್ಸಯ್ಯಿದ್ ಇಬ್ರಾಹಿಂ ಬಾಫಖೀ ತಂಙಳ್ ಪ್ರಾರ್ಥನೆ ಗೆ ನೇತ್ರತ್ವ ವಹಿಸಿದರು.
ಯುವ ವಿದ್ವಾಂಸ ಶರಫುದ್ದೀನ್ ಸಅದಿ ಉಪ್ಪಳ್ಳಿ ಮುಖ್ಯ ಭಾಷಣಗೈದರು.
ಹಾಸನ-ಚಿಕ್ಕಮಗಳೂರು SJM ಜಿಲ್ಲಾಧ್ಯಕ್ಷ ಇಬ್ರಾಹಿಂ ಸ ಅದಿ, ಡಿವಿಶನ್ ಅಧ್ಯಕ್ಷ ರಪೀಖ್ ಸಖಾಫಿ, ಜಿಲ್ಲೆಯು ಪ್ರ.ಕಾರ್ಯದರ್ಶಿ ಮುಸ್ತಫಾ ಝುಹ್ರೀ, ಸ್ಥಳೀಯ ಗೌರವಾಧ್ಯಕ್ಷ ಖಲಂದರ್ ಹಾಜೀ, ಅಧ್ಯಕ್ಷ ಅಬ್ದುಲ್ಲಾ ಹಾಜೀ, ಉಪಾಧ್ಯಕ್ಷ ರಹೀಂ ಹಾಜೀ, ಅಝೀಝ್ ಕರಾವಳಿ, SMA ಜಿಲ್ಲಾಧ್ಯಕ್ಷ ನಾಸಿರ್ ಬಾಳೆಹೊನ್ನೂರು. ಚಿ.ಮಗಳೂರು ಬ್ಯಾರೀ ಒಕ್ಕೂಟದ ಸದಸ್ಯ ಬಿ.ಎಸ್.ಮುಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ನೌಷಾದ್ ಸ್ವಾಗತಿಸಿ, ಸಫ್ವಾನ್ ಧನ್ಯವಾದವಿತ್ತರು.