janadhvani

Kannada Online News Paper

ಮಿತ್ತೂರಿನಲ್ಲಿ ಎಸ್ಸೆಸ್ಸೆಫ್ knowscho-18 ವಿಶೇಷ ಕಾರ್ಯಕ್ರಮ

ಪುತ್ತೂರು:ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ದರ್ಸ್, ದಅವಾ, ಶರೀಅತ್ ಕಾಲೇಜು ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಸಂಘಟಿಸಿರುವ knowscho-18 ಕಾರ್ಯಕ್ರಮ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಅಧ್ಯಕ್ಷತೆಯಲ್ಲಿ ಮಿತ್ತೂರು ಕೆ.ಜಿ.ಎನ್ ಸಭಾಂಗಣದಲ್ಲಿ ನಡೆಯಿತು.


ಕೆ.ಜಿ.ಎನ್ ಮಿತ್ತೂರು ಸಂಸ್ಥೆಯ ದ ಅವಾ ಉಪನ್ಯಾಸಕ ಹುಸೈನ್ ಅಹ್ಸನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ರಾಜ್ಯ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಟೀಮ್ ಹಸನೈನ್ ಮಾಹಿತಿಯನ್ನು ನೀಡಿದರು.

ಎಸ್ಸೆಸ್ಸೆಫ್ ರಾಜ್ಯ ಚುನಾವಣಾ ಮಂಡಳಿ ಕನ್ವೀನರ್ ಹಾಫಿಳ್ ಯಾಕೂಬ್ ಸ ಅದಿ ನಾವೂರು ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು,ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ಶಾಕಿರ್ ಹಾಜಿ ಮಿತ್ತೂರು ,ರವೂಫ್ ಖಾನ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

ಟೀಂ ಹಸನೈನ್ ಹಾಗೂ ಚುನಾವಣಾ ಮಾಹಿತಿಗಾಗಿ ಸಂಘಟಿಸಿರುವ ಈ ಕ್ಯಾಂಪ್ ನಲ್ಲಿ ಪ್ರತಿ ದರ್ಸ್, ದ ಅವಾ ಕಾಲೇಜು, ಶರೀಅತ್ ಕಾಲೇಜು ಗಳಿಂದ ತಲಾ ಐದು ವಿದ್ಯಾರ್ಥಿಗಳು ಭಾಗವಹಿಸಿ ಕ್ಯಾಂಪ್ ನ ಸದುಪಯೋಗವನ್ನು ಪಡೆದುಕೊಂಡರು.

ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ,ಕೊನೆಗೆ ವಂದಿಸಿದರು.

error: Content is protected !! Not allowed copy content from janadhvani.com