ಅಗಾಧ ಪಾಂಡಿತ್ಯ,ಸುನ್ನೀ ಸಂಘ ಕುಟುಂಬಗಳಿಗೆ ಸ್ಪೂರ್ತಿಯಾಗಿದ್ದ ಸಮಸ್ತ ಕೋಶಾಧಿಕಾರಿ ಶೈಖುನಾ ಕಂಝುಲ್ ಉಲಾಮ ಚಿತ್ತಾರಿ ಉಸ್ತಾದರ ವಿಯೋಗವು ಸುನ್ನೀ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆಯೆಂದು ಬಹರೈನ್ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್.ಎಂ, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಫೈನಾನ್ಸಿಯಲ್ ಕಂಟ್ರೋಲರ್ ಅಬ್ದುಲ್ ಅ ಝೀಝ್ ಸುಳ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆ.ಸಿ.ಎಫ್ ಎಲ್ಲಾ ಘಟಕಗಳಲ್ಲೂ ಶೈಖುನಾ ಚಿತ್ತಾರಿ ಉಸ್ತಾದರ ಹೆಸರಿನಲ್ಲಿ ಖತಮುಲ್ ಖುರ್ಆನ್, ತಹ್ಲೀಲ್ ಸಮರ್ಪಣೆ ಹಾಗೂ ಪ್ರತ್ಯೇಕ ದುವಾ ನಡೆಸಲು ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯು ವಿನಂತಿಸಿಕೊಂಡಿದೆ. ಕೆ. ಸಿ .ಎಫ್ ಬಹರೈನ್ ಐ.ಎನ್.ಸಿ ಪ್ರತಿನಿಧಿಗಳಾದ ಜಮಾಲುದ್ದೀನ್ ವಿ ಟ್ಟಲ್, ಅಲಿ ಮುಸ್ಲಿಯಾರ್ ಕೊಡಗು ಹಾಗೂ ಫಕ್ರುದ್ದೀನ್ ಹಾಜಿ ಉಪಸ್ಥಿತರಿದ್ದರು.