janadhvani

Kannada Online News Paper

ಮನುಷ್ಯ ಜೀವನದ ಪ್ರತಿಯೊಂದು ನಿಮಿಷವೂ ಅಮೂಲ್ಯವಾದುದು ಝೈನುಲ್ ಉಲಮಾ

ಮಾಣಿ : ಅಲ್ಲಾಹನ ಸ್ರಷ್ಠಿಯಾದ ಮನುಷ್ಯನು ಅಲ್ಲಾಹನ ಭಯದಿಂದ ಜೀವಿಸಬೇಕು. ಈ ಲೋಕದ ಜೀವನವು ಶಾಶ್ವತವಾದುದಲ್ಲ, ಮರಣಾನಂತರವೇ ಶಾಶ್ವತ ಜೀವನ ಆರಂಭಗೊಳ್ಳಲಿದ್ದು, ಪೂರ್ವ ಕಾಲದ ಮಹತ್ಮರ ಪ್ರತಿಯೊಂದು ಉಸಿರಾಟವು ಅಲ್ಲಾಹನ ಸ್ಮರಣೆಯಿಂದಾಗಿತ್ತು, ನಮ್ಮ ನಶ್ವರ ಜೀವನದ ಪ್ರತಿಯೊಂದು ನಿಮಿಷವು ಅಮೂಲ್ಯವಾದುದು ಆದ್ದರಿಂದ ಸಿಕ್ಕಿದ ಸಮಯವನ್ನು ಸಾಮಾಜಿಕ ಜಾಲಾತಾಣದಲ್ಲಿ ವ್ಯಯಿಸದೇ ಅಲ್ಲಾಹನು ಕಲ್ಪಿಸಿದ ಸತ್ಕಾರ್ಯಗಳನ್ನು ಮಾಡಿ, ಅವನು ವಿರೋಧಿಸಿದ ಕಾರ್ಯಗಳನ್ನು ತ್ಯಜಿಸಿ ನಮ್ಮ ಜೇವನದ ಅಮೂಲ್ಯ ಸಮಯವನ್ನು ವ್ಯಯಿಸಿ, ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿ ಎಂದು ಕರ್ನಾಟಕ ರಾಜ್ಯ ಸುನ್ನಿ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದರು ನುಡಿದರು. ಅವರು ಸುನ್ನಿ ಯುವಜನ ಸಂಘ ಮಾಣಿ ಸೆಂಟರ್ ದಾರುಲ್ ಇರ್ಷಾದ್ ನಲ್ಲಿ ದಿನಾಂಕ 20.10.2018ರಂದು ಹಮ್ಮಿಕೊಂಡ ವಾರ್ಷಿಕ ಅಸೆಂಬ್ಲಿಯಲ್ಲಿ ದುಆ ನೆರೆವೇರಿಸಿ ಮಾತನಾಡಿದರು.

ಎಸ್ ವೈ ಎಸ್ ಮಾಣಿ ಸೆಂಟರ್ ಅಧ್ಯಕ್ಷರಾದ ಅಬ್ದುರ್ರಝ್ಝಾಕ್ ಮದನಿ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದರು. ದಾರುಲ್ ಇರ್ಷಾದ್ ವಿದ್ಯಾ ಸಂಸ್ಥೆಯ ಮೇನೇಜರ್ ಇಬ್ರಾಹಿಮ್ ಸಅದಿ ಮಾಣಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಸೆಂಟರ್ ಕೋಶಾದಿಕಾರಿ ಹಾಜಿ ಕಾಸಿಂ ಪರ್ಲೋಟುರವರು ಲೆಕ್ಕಪತ್ರ ಮಂಡಿಸಿದರು

ಕಾರ್ಯಕ್ರಮದ ಕೇಂದ್ರ ಬಿಂದು ಎಸ್ ವೈ ಎಸ್ ರಾಜ್ಯಧ್ಯಕ್ಷರಾದ ಜಿ ಎಂ ಎಂ ಕಾಮಿಲ್ ಸಖಾಫಿ ರವರು ತರಗತಿ ನಡೆಸಿ ಮಾತನಾಡಿ ಸಂಘಟನಾ ಪ್ರವರ್ತಕರಲ್ಲಿ ನಾಡಿನ ಹಾಗೂ ಸಮುದಾಯದ ಪ್ರಗತಿಗೆ ಸ್ಪಂದನೆ, ಆಮಂತ್ರಣ ಸ್ವೀಕಾರ, ರಹಸ್ಯ ಕಾಪಾಡುವಿಕೆ, ಇತರರ ಕುಂದು-ಕೊರತೆಗಳನ್ನು ಜನರ ಮದ್ಯೆ ಹೇಳದಿರುವುದು, ಅಲ್ಲಾಹನ ದೀನಿನ ನಿಯಮಗಳನ್ನು ಕಾಪಾಡುವುದು, ಅವ್ಯವಹಾರ ಇಲ್ಲದ ನಿಷ್ಕಳಂಕ ಜೀವನ, ಸಮಯಪಾಲನೆ, ಸಾಂತ್ವನ ಕಾರ್ಯ ಮುಂತಾದ ಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ಸಂಘಟನೆಯು ಅಬಿವ್ರದ್ದಿಹೊಂದಲು ಸಾಧ್ಯ ಇಲ್ಲದಿದ್ದಲ್ಲಿ ಹೆಸರಿಗೆ ಮಾತ್ರ ಸಂಘಟನೆಯಾದೀತು ಎಂದು ಎಚ್ಚರಿಸಿದರು

ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಮಾಣಿ ಸೆಂಟರ್ ಉಪಾಧ್ಯಕ್ಷರುಗಳಾದ ಇಬ್ರಾಹಿಮ್ ಹಾಜಿ ಶೇರಾ, ಯೂಸುಫ್ ಹಾಜಿ ಸೂರಿಕುಮೇರ್, ಖಾಸಿಂ ಪಾಟ್ರಕೋಡಿ ಉಪಸ್ಥಿತರಿದ್ದರು. ಎಸ್ ವೈ ಎಸ್ ಮಾಣಿ ಸೆಂಟರ್ ಕಾರ್ಯದರ್ಶಿ ಅಬ್ದುಲ್ ಲತೀಫ್ ಮದನಿ ಧನ್ಯವಾದಗೈದರು. ಕೊನೆಯಲ್ಲಿ ಅಗಲಿದ ಸುನ್ನಿ ಸಂಘ ಕುಟುಂಬದವರಿಗೆ ವಿಶೇಷ ದುಆ ನಡೆಸಿ, ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು

ಯೂಸುಫ್ ಸಯೀದ್ ನೇರಳಕಟ್ಟೆ
ಪ್ರಧಾನ ಕಾರ್ಯದರ್ಶಿ
ಎಸ್ ವೈ ಎಸ್ ಮಾಣಿ ಸೆಂಟರ್

error: Content is protected !! Not allowed copy content from janadhvani.com