janadhvani

Kannada Online News Paper

ತರ್ಮೋಕೋಲಿನಲ್ಲಿ ಮೂಡಿಬಂದ ದ್ಸಿಕ್ರಾ ಕ್ಯಾಂಪಸ್

ಮೂಡಬಿದ್ರೆಯ ದ್ಸಿಕ್ರಾ ಥಿಯೋಲಜಿಕಲ್ ಅಕಾಡೆಮಿಯ ಮುಹಮ್ಮದ್ ಮುಸ್ತಫಾ ಎಂಬ ವಿದ್ಯಾರ್ಥಿಯು ದ್ಸಿಕ್ರಾ ಕ್ಯಾಂಪಸ್ಸಿನ ಅದೇ ಮಾದರಿಯನ್ನು ತರ್ಮೋಕೋಲ್ ಮೂಲಕ ನಿರ್ಮಿಸಿದ್ದು, ವಿವಿಧೆಡೆಗಳಿಂದ ಆ ವಿದ್ಯಾರ್ಥಿಯ ಈ ಅಸಾಮಾನ್ಯ ಕಲಾಗಾರಿಕೆಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಸುಮಾರು 7000₹ ರೂಪಾಯಿ ವೆಚ್ಚದಲ್ಲಿ ಒಂದು ತಿಂಗಳುಗಳ ಕಾಲ ನಿರಂತರ ಶ್ರಮ ವಹಿಸಿ ಮಾಡಿರುವ ಈ ಕಲಾಕೃತಿಯು ಎಲ್ಲರನ್ನೂ ನಿಬ್ಬೆರಗುಗೊಳಿಸಿದೆ. ಈ ಸಾಧನೆಗಾಗಿ ದ್ಸಿಕ್ರಾ ಅಕಾಡೆಮಿಯಲ್ಲಿ ನಡೆದ ಜಲಾಲಿಯ್ಯ ಸಂಗಮದಲ್ಲಿ ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಲ್ ರವರು ಪದಕವನ್ನು ನೀಡಿ ಅಭಿನಂದಿಸಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ವಿವಿಧ ರೀತಿಯ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಸಂಸ್ಥೆಯ ಚೆಯರ್ಮೇನ್ ನೌಫಲ್ ಸಖಾಫಿ ಕಳಸ ಉಸ್ತಾದ್ ರವರು ಮುಕ್ತಕಂಠದಿಂದ ಈ ಕಾರ್ಯವನ್ನು ಹೊಗಳಿ ಶ್ಲಾಘಿಸಿದ್ದಾರೆ.

ದ್ಸಿಕ್ರಾದಲ್ಲಿ ದರ್ಸ್ ವ್ಯಾಸಂಗದ ನಡೆಸುವುದರ ಜೊತೆಗೆ ಇಂಜಿನಿಯರಿಂಗ್ ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ಮುಹಮ್ಮದ್ ಮುಸ್ತಫಾ ಮೂಲತ ಕೆ.ಸಿ ರೋಡ್ ಗ್ರಾಮದ ಕೆ.ಸಿ ನಗರ ನಿವಾಸಿಗಳಾಗಿರುವ ಇಬ್ರಾಹಿಂ ಹಸೈನಾರ್ ಹಾಗೂ ರವರ ಹಿರಿಯ ಪುತ್ರ.

error: Content is protected !! Not allowed copy content from janadhvani.com