ಕಾಸರಗೋಡು ಉಪ್ಪಳ: ಮೊಗರ್ ದಿನಾಂಕ 14.10.2018 ನೇ ಆದಿತ್ಯವಾರ ಸಂಜೆ 4 ಗಂಟೆಗೆ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್ ಇದರ ನೂತನ ಕಛೇರಿಯ ಉದ್ಘಾಟನೆ ಸಮಾರಂಭ ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ನಾಡಿನಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ನಾಡಿನ ಉತ್ತಮ ಬೆಳವಣಿಗೆ ಗೆ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್ ರಚಿಸಲಾಗಿದ್ದು, ಬಂದು ಸೇರಿದ ಹಲವು ಗಣ್ಯ ವ್ಯಕ್ತಿಗಳು ಸಂತಸ ವ್ಯಕ್ತಪಡಿಸಿದರು. ಕಜೆಎಮ್ ಖತೀಬ್ ಅಬೂಬಕ್ಕರ್ ಹನೀಫಿ ರಿಬ್ಬನ್ ಕತ್ತರಿಸುವ ಮೂಲಕ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್ ಗೆ ಚಾಲನೆ ನೀಡಿದರು. ನಂತರ ಇಸ್ಮಾಯಿಲ್ ಉಸ್ತಾದ್ ಕೊಡುಂಗೈ ದುಅ ನೆರವೇರಿಸಿದರು. ಸಭೆಯನ್ನು ಕಜೆಎಮ್ ಅಧ್ಯಕ್ಷ ಕುಞಪ್ಪ ಹಾಜಿ ಉದ್ಘಾಟನೆ ಬಾಷಣ ನಡೆಸಿದರು. ನಂತರ ಇಸ್ಮಾಯಿಲ್ ಉಸ್ತಾದ್, ಅಬೂಬಕ್ಕರ್ ಹನೀಫಿ ಹಾಗೂ ಅಬ್ದುರಹಿಮಾನ್ ಮದನಿ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್ ನ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮವನ್ನು ಸತ್ತಾರ್ ಹಾಜಿ ಮಾಕಾಳಿ ನಿರೂಪಿಸಿದರು. ನೆರೆದಿದ್ದ ಜನರ ಮುಂದೆ ಸಮಾಜ ಸೇವೆ ಯಾವ ರೀತಿಯಲ್ಲಿರಬೇಕು ಮುಂದಿನ ದಿನಗಳಲ್ಲಿ ನಮ್ಮ ಕರ್ತವ್ಯ ಏನೆಂಬುದನ್ನು ಮನವರಿಕೆ ಮಾಡಿ ಮಹಮ್ಮದ್ ಕಂಚಿಲ ವಂದಿಸಿದರು. ಕೊನೆಯಲ್ಲಿ ಬಂದು ಸೇರಿದ ಅತಿಥಿಗಳಿಗೆ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್ ನ ಮೆಚ್ಚುಗೆಯ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ನಾಡಿನಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗು ತನ್ನ ನಡೆತವನ್ನು ಅಡ್ಯಾರ್ ಕನ್ನೂರ್ ನಲ್ಲಿ ನಡೆದ ಅಪಘಾತದಲ್ಲಿ ಸಂರ್ಪೂರ್ಣವಾಗಿ ಕಳೆದುಕೊಂಡಿತು. ಇವರ ಚಿಕಿತ್ಸೆಗಾಗಿ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್ ಇದರ ಕಛೇರಿ ಉದ್ಘಾಟನೆ ಸಮಾರಂಭದಲ್ಲಿ ಸ್ವಲ್ಪ ಧನ ಹಸ್ತಾಂತರಿಸಲಾಯಿತು. ಉದ್ಘಾಟನೆ ಸಮಾರಂಭದಲ್ಲಿ ಇಂತಹ ಸಹಾಯ ಮಾಡುವುದರೊಂದಿಗೆ ಸಮಾಜ ಸೇವೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಸಭೆಯಲ್ಲಿ ಬಶೀರ್, ಸಮೀರ್ ಎಮ್ಕೆ, ಶೆರೀಫ್ ಎಸ್ಪಿ, ಅಬ್ದುಲ್ ರಹಿಮಾನ್ ಸಂತಡ್ಕ, ಶರೀಫ್ ಮೊಗರ್, ಮೊಹಮ್ಮದ್ ಹಾಜಿ ಕೋಡಿಬೈಲ್, ಅಶ್ರಫ್ ಕೆ.ಸಿ ರೊಡ್ ಮತ್ತು ಬಶೀರ್ ಮಂಜಲ್ ಗುಡ್ಡ ಉಪಸ್ಥಿತರಿದ್ದರು.
ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ QIF ರಚಿಸಲಾಗಿದ್ದು ಕಛೇರಿ ಉದ್ಘಾಟನೆಗೆ ಬಂದು ಸಹಕರಿಸಿದ ಎಲ್ಲಾ ಸಹೊದರರಿಗೆ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್ ವತಿಯಿಂದ ತುಂಬು ಹೃದಯದ ಧನ್ಯವಾದಗಳು.
ಸಂಸ್ಥೆ ಬೆಳೆಯಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಿದೆ ನಮ್ಮ ಜೊತೆ ಕೈಜೋಡಿಸಿ ಬಡವರ ಪಾಲಿಗೆ ನೆರವಾಗೋಣ
ವರದಿ :-ಹಫೀಝ್ ಇಸ್ಮಾಯಿಲ್ ಕೆ.ಸಿ ರೋಡ್