janadhvani

Kannada Online News Paper

ಕ್ಯಾನ್ಸರ್ ಪೀಡಿತ ಮಗುವಿಗೆ ನೆರವಾದ ಮಿನ್ಹಾಜುಸ್ಸುನ್ನ್ಹ ಅಕಾಡಮಿ ತಲಪಾಡಿ

ರಕ್ತದ ಕ್ಯಾನ್ಸರ್ ನಿಂದ ಬಳಲು ತಿದ್ದ ಕೃಷ್ಣಾಪುರದ ಸಫ್ವಾನ್ ಎಂಬ ಮಗುವಿಗೆ ದಾನಿಗಳ ಸಹಕಾರದಿಂದ 50,000.00ರೂ ಅನ್ನು ನೀಡಿ ಮಗುವಿನ ಚಿಕಿತ್ಸೆಗೆ ನೆರವಾಗಿದೆ. ಕಳೆದ 4 ವರ್ಷಗಳಿಂದ ಸಮಾಜಿಕ, ಧಾರ್ಮಿಕ ಹಾಗೂ ಶೈಕ್ಷನಿಕ ಬೆಳವನಿಗೆಯ ಗುರಿಯನ್ನಿಟ್ಟು ಕಾರ್ಯಾಚರಿಸುತ್ತಿರುವ MSAT ಮಿನ್ಹಾಜ್ ವಿಮೆನ್ಸ್ ಶರೀಅತ್ ಕಾಲೇಜನ್ನು ನಡೆಸುತ್ತಿದೆ. ಸಂಸ್ಥೆಯ ಚೈರ್ಮ್ಯಾನರಾಗಿರುವ MSM ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ M.A,(Phd), ಯವರ ಮಾರ್ಗದರ್ಶನದಲ್ಲಿ ರಿಲೀಫ್ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ MSAT ಊರಿನ ಹಾಗೂ ಪರ ಊರಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿದೆ.

ಸಫ್ವಾನ್ ಎಂಬ ಮಗುವಿನ ಚಿಕಿತ್ಸೆಗೆ ಸುಮಾರು 15ಲಕ್ಷಗಳ ಅವಷ್ಯಕತೆ ಇರುವುದನ್ನು ಅರಿತು ಅವನ ತಂದೆಯವರನ್ನು ಬೇಟಿಮಾಡಿ 50000ರೂ ಯ ಚೆಕ್ ಅನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಫಾರೂಕ್ ಕೆ.ಎಂ ಅವರು MSAT ರಿಯಾದ್ ಝೋನಲ್ ಅಧ್ಯಕ್ಷರಾದ ರವೂಫ್ ರಿಯಾದ್, ರಿಯಾದ್ ಝೋನಲಿನ ಕಾರ್ಯಕರ್ತರಾದ ಮುಹಮ್ಮದ್ ತಲಪಾಡಿ, ಅಬ್ದುಲ್ ಕಾದರ್ ರಿಯಾದ್, SSF ದ. ಕ ಜಿಲ್ಲಾ ಮಾಜಿ ಕ್ಯಾಂಪನ್ ಕಾರ್ಯದರ್ಶಿಗಳಾಗಿದ್ದ ಆಸಿಫ್ ಹಾಜಿ, SSF ಕೃಷ್ಣಾಪುರ ಸೆಕ್ಟರ್ ಅಧ್ಯಕ್ಷರಾದ ತಮೀಮ್ ಕೃಷ್ಷಾಪುರ, SSF ಉಳ್ಳಾಲ ಡಿವಿಶನ್ ಕಾರ್ಯದರ್ಶಿಗಳಾದ ಹಮೀದ್ ತಲಪಾಡಿಯವರ ಸಮ್ಮುಕದಲ್ಲಿ ನೀಡಿದರು.

error: Content is protected !! Not allowed copy content from janadhvani.com