janadhvani

Kannada Online News Paper

ಎಸ್ಸೆಸ್ಸೆಫ್ ಟೀಮ್ ಹಸನೈನ್ ನಿಂದ ಉತ್ತರ ಕರ್ನಾಟಕ ರಿಹ್ಲಾ ಯಾತ್ರೆ

ಮಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಭರವಸೆಯ ನಾಯಕರನ್ನು ಸೃಷ್ಟಿಸುವ ಉದ್ದೇಶದಲ್ಲಿ ರಚಿಸಿರುವ ಟೀಮ್ ಹಸನೈನ್ ನ ಕಾರ್ಯಕರ್ತರಿಗೆ ಉತ್ತರ ಕರ್ನಾಟಕ ಪ್ರಭೋದನೆಗಾಗಿ ರಿಹ್ಲಾ ದ ಅವಾ ಟೂರನ್ನು ಹಮ್ಮಿಕೊಳ್ಳಲಾಗಿದೆ.ಮುಂದಿನ ದಿನಗಳಲ್ಲಿ ರಾಜ್ಯದ 10 ಜಿಲ್ಲೆಗಳ ಡಿವಿಷನ್ ಗಳ ತಂಡವು ಉತ್ತರ ಕರ್ನಾಟಕ ಪ್ರಮುಖ ಜಿಲ್ಲೆಗಳ ಹಳ್ಳಿಗಳಿಗೆ ದ ಅವಾ ಕಾರ್ಯಾಚರಣಗೆ ತೆರಳಲಿದ್ದು,ಅದರ ಮೊದಲ ತಂಡವು ಮೂಡಬಿದ್ರೆ ಡಿವಿಷನ್ ಟೀಮ್ ಹಸನೈನ್ ಕಾರ್ಯಕರ್ತರಿಂದ ರಿಹ್ಲಾ ಯಾತ್ರೆಯು ಕೊಪ್ಪಳ ಜಿಲ್ಲೆಯ ರಾಮನಗರ,ಬಟ್ಟರ ನರ್ಸಾಪುರ,ಕಕ್ಕರಗೋಳ,ಹುಲಿ ಹೈದರ್,ತಾವರಗೇರ,ಸಿದ್ದಾಪುರ,ಯರಡೋಣ,ಬೆನ್ನೂರು ಹಳ್ಳಿಗಳಲ್ಲಿ ರಿಹ್ಲಾ ದ ಅವಾ ಟೂರ್ ಅಕ್ಟೋಬರ್ 13,14,15 ದಿನಾಂಕಗಳಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ರವರ ಮಾರ್ಗದರ್ಶನದಲ್ಲಿ ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಷನ್ ಟೀಮ್ ಹಸನೈನ್ ಗೈಡ್ ಸಿದ್ದೀಕ್ ಬಜ್ಪೆ ರವರ ನೇತೃತ್ವದಲ್ಲಿ ನಡೆಯಲಿರವುದು ಎಂದು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com