janadhvani

Kannada Online News Paper

ಎಸ್ ಎಸ್ ಎಫ್ ಮಧ್ಯ ಕರ್ನಾಟಕ ಜಿಲ್ಲೆಗಳ ಚುನಾವಣಾ ಕಾರ್ಯಾಗಾರ

ದಾವಣಗೆರೆ:ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ವಿವಿಧ ಘಟಕಗಳ ಚುನಾವಣೆ ನವೆಂಬರ್ ಒಂದರಿಂದ ಜನವರಿ ಕೊನೆಯ ತನಕ ನಡೆಯಲಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ರಾಜ್ಯ ಮಟ್ಟದ ಚುನಾವಣಾ ಕಾರ್ಯಾಗಾರ ಪೂರ್ತಿಯಾಗುತ್ತಿದೆ.

ಅದರಂತೆ ಮಧ್ಯಕರ್ನಾಟಕದ ದಾವಣಗೆರೆ, ಹಾವೇರಿ, ಚಿತ್ರದುರ್ಗ, ಗದಗ ಮುಂತಾದ ಜಿಲ್ಲೆಗಳ ವಿವಿಧ ಘಟಕಗಳ ಚುನಾವಣಾ ಅಧಿಕಾರಿಗಳು ಮತ್ತು ನಾಯಕರ ಕಾರ್ಯಾಗಾರ ಹರಿಹರದ ಅಂಜುಮಾನ್ ಶಾದಿಮಹಲ್ ನಲ್ಲಿ ನಡೆಯಿತು.

ರಾಜ್ಯ ಚುನಾವಣಾ ಮಂಡಳಿ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಕಾರ್ಯಾಗಾರ ನಡೆಸಿ ಕೊಟ್ಟರು. ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಸಂಘಟನಾ ತರಬೇತಿ ನೀಡಿದರು.ಮುಸ್ತಫ ನಯೀಮಿ ಹಾವೇರಿ ಟೀಂ ಹಸನೈನಿ ಬಗ್ಗೆ ವಿವರಿಸಿದರು.

ರವೂಫ್ ಮೂಡುಗೋಪಾಡಿ ತಾಂತ್ರಿಕ ಮಾಹಿತಿ ನೀಡಿದರು. ಎಸ್ ಎಸ್ ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ರಾಜ್ಯ ಸದಸ್ಯ ಇಕ್ಬಾಲ್ ರಾಣಿಬೆನ್ನೂರು, ದಾವಣಗೆರೆ ಜಿಲ್ಲಾಧ್ಯಕ್ಷ ಸಯ್ಯಿದ್ ಮುಖ್ತಾರ್ ಅಹ್ಮದ್ ರಝ್ವಿ, ಇಮ್ರಾನ್ ರಝಾ ದಾವಣಗೆರೆ, ನಯಾಝ್ ಮಲೆಬೆಣ್ಣೂರು, ಆದಮ್ ಹಝರತ್ ಸಖಾಫಿ ಚಿತ್ರದುರ್ಗ, ಅತಾಉಲ್ಲ ದುರ್ಗ, ಮೌಲಾನಾ ಜಾಫರ್ ಸಾಹೇಬ್ ಹಿರಿಯೂರು, ಸಯ್ಯಿದ್ ರಹ್ಮತುಲ್ಲಾ, ಇರ್ಫಾನ್ ಸವನೂರು ಮುಂತಾದವರು ಉಪಸ್ಥಿತರಿದ್ದರು. ಕೆಕೆಎಂ ಸಖಾಫಿ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com