janadhvani

Kannada Online News Paper

ಕೆ ಸಿ ಎಫ್ ಒಮಾನ್ ಮಸ್ಕತ್ ಝೋನ್ ಗಲ್ಫ್ ಇಶಾರ ಕನ್ವೆನ್ಷನ್

ಅಚ್ಚ ಕನ್ನಡದ ಸ್ವಚ್ಚಂದ ಮಾಸ ಪತ್ರಿಕೆ ಗಲ್ಫ್ ಇಶಾರ ಚಂದಾ ಅಭಿಯಾನದ ಪ್ರಯುಕ್ತ ಕೆ ಸಿ ಎಫ್ ಒಮಾನ್ ಮಸ್ಕತ್ ಝೋನ್ ಅಧೀನದಲ್ಲಿ ಇಶಾರ ಕನ್ವೆನ್ಷನ್ ಮಸ್ಜಿದುಲ್ ಅಸ್ಮಾ ಪಾರ್ಕ್ ಅಲ್ ಕುರುಮ್ ನಲ್ಲಿ ನಡೆಸಲಾಯಿತು. ಬಹು ಸಲೀಂ ಮಿಸ್ಬಾಹಿ ಕನ್ಯಾನ ರವರ ದುವಾದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಝೋನ್ ಅಧ್ಯಕ್ಷ ಮುಖ್ತಾರ್ ರವರು ಅಧ್ಯಕ್ಷತೆ ವಹಿಸಿದರು.ಪ್ರಸ್ತುತ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮುಹಮ್ಮದ್ ಕಿಲ್ಲೂರು ಸ್ವಾಗತಿಸಿ ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿಯವರು ಉಧ್ಘಾಟಿಸಿದರು. ನಂತರ ಕೆ ಸಿ ಎಫ್ ರಾಷ್ಟ್ರೀಯ ಸಮಿತಿ ನಾಯಕರಾದ ಕಾಸಿಂ ಪೊಯ್ಯತ್ತಬೈಲ್ ರವರು ಪತ್ರಿಕೆ ವಿಶೇಷತೆಗಳು ಮತ್ತು ಓದುವ ಅಬ್ಯಾಸ ಬೆಳೆಸುವುದರ ಮಹತ್ವದ ಬಗ್ಗೆ ತರಬೇತಿ ನಡೆಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಬಹು ಸೈಫುದ್ದೀನ್ ಅಲ್ ಹೈದ್ರೂಸಿ ರವರು ಸಮೀರ್ ಉಸ್ತಾದ್ ಹೂಡೆ ರವರನ್ನು ಪ್ರಥಮ ಸದಸ್ಯರಾನ್ನಾಗಿಸುವ ಮೂಲಕ ಝೋನ್ ಸೆಕ್ಟರ್ ವ್ಯಾಪ್ತಿ ಚಂದಾ ಅಭಿಯಾನಕ್ಕೆ ಚಾಲನೆ ನೀಡಿದರು.ರಾಷ್ಟ್ರೀಯ ಸಮಿತಿಯ ಎಜುಕೇಶನ್ ವಿಂಗ್ ಚಯರ್ಮಾನ್ ಅಯ್ಯೂಬ್ ಕೋಡಿಯವರು ಚಂದಾ ಅಭಿಯಾನದ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ನಾಯಕರಾದ ಝುಬೈರ್ ಸಅದಿ ಪಾಟ್ರಕೋಡಿ,ಕಲಂದರ್ ಬಾವ ಉಸ್ತಾದ್,ಶಂಸುದ್ದೀನ್ ಕಡಬ,ನಿಝಾರ್ ಝುಹ್ರಿ ಉಸ್ತಾದ್,ಹಾಜಿ ಗಫ್ಫಾರ್ ನಾವುಂದ,ಅಶ್ರಫ್ ಭಾರತ್ ಹಾಗೂ ರಾಷ್ಟ್ರೀಯ ನಾಯಕರು ಝೋನ್ ಭಾರವಾಹಿಗಳು ಮತ್ತು ಸೆಕ್ಟರ್ ನಾಯಕರು ಸಮಿತಿ ಕಾರ್ಯಕರ್ತರು ಪಾಲ್ಗೊಂಡಿದ್ದರು .

error: Content is protected !! Not allowed copy content from janadhvani.com