janadhvani

Kannada Online News Paper

ಕೆಸಿಎಫ್ ಒಮಾನ್, ಸೊಹಾರ್ ಸೆಕ್ಟರ್ ಅಸ್ತಿತ್ವಕ್ಕೆ

ಕೆಸಿಎಫ್ ಒಮಾನ್ ಸೊಹಾರ್ ಝೋನ್ ಇದರ ಅಧೀನದಲ್ಲಿ ಝೋನ್ ಅಧ್ಯಕ್ಷ ಆರಿಫ್ ಮದಕ ಇವರ ಅಧ್ಯಕ್ಷತೆಯಲ್ಲಿ ಐಸಿಎಫ್ ಮದರಸದಲ್ಲಿ ಸೊಹಾರ್ ಸೆಕ್ಟರ್ ಅನ್ನು ಅಸ್ತಿತ್ವಕ್ಕೆ ತರಲಾಯಿತು ಹಾಗೂ ಇಶಾರ ಡೇ(ಚಂದಾದಾರರ ಅಭಿಯಾನ) ಕ್ಕೆ ಚಾಲನೆ ನೀಡಲಾಯಿತು. ಸೊಹಾರ್ ಝೋನ್ ಎಜುಕೇಶನ್ ಅಧ್ಯಕ್ಷ ಸಾದಿಕ್ ಕಾಟಿಪಳ್ಳ ಇವರು ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಸಮಿತಿ ಸದಸ್ಯ ಇಕ್ಬಾಲ್ ಎರ್ಮಾಲ್
ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೊಹಾರ್ ಸೆಕ್ಟರ್ ನೂತನ ಅಧ್ಯಕ್ಷರಾಗಿ ನಿಸಾರ್ ಜೆಪ್ಪು,ಪ್ರದಾನ ಕಾರ್ಯದರ್ಶಿ ಶಫೀಕ್ ಎಲಿಮಲೆ,ಕೋಶಾದಿಕಾರಿ ಫಝಲ್ ಭಟ್ಕಳ, ಸಂಘಟನಾ ಅಧ್ಯಕ್ಷ ಅಶ್ರಫ್ ಕುತ್ತಾರ್,ಕಾರ್ಯದರ್ಶಿ ಮುಬೀನ್ ಜೋಕಟ್ಟೆ, ಸಾಂತ್ವನ ವಿಭಾಗ ಅಧ್ಯಕ್ಷ ಅಝೀಝ್ಉಪ್ಪಳ, ಕಾರ್ಯದರ್ಶಿ ಸೈಫ್ ಕಾಟಿಪಳ್ಳ,ಎಜುಕೇಶನ್ ವಿಭಾಗ ಅಧ್ಯಕ್ಷರಾಗಿ ಹೈದರ್ ಬಂಟ್ವಾಳ, ಕಾರ್ಯದರ್ಶಿ ರಫೀಕ್ ಕಕ್ಕಿಂಜೆ ಹಾಗೂ ಸದಸ್ಯರಾಗಿ ನಿಸಾರ್ ಖಾನ್ ಇವರನ್ನು ಆರಿಸಲಾಯಿತು.ಸೊಹಾರ್ ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕುತ್ತಾರ್ ಸ್ವಾಗತಿಸಿ ಫಲಜ್ ಸೆಕ್ಟರ್ ಅಧ್ಯಕ್ಷ ಮುನೀರ್ ಕುತ್ತಾರ್ ವಂದಿಸಿದರು.

error: Content is protected !! Not allowed copy content from janadhvani.com