janadhvani

Kannada Online News Paper

SSF ತುಂಬೆ ಶಾಖೆ ವತಿಯಿಂದ ಮುಹರ್ರಮ್ ತರಗತಿ

SSF ತುಂಬೆ ಶಾಖೆ ವತಿಯಿಂದ 16/9/2018 ರಂದು ರಾತ್ರಿ ಇಶಾ ನಮಾಝಿನ ಬಳಿಕ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ “ಮುಹರ್ರಮಿನ ಮಹತ್ವ” ಎಂಬ ವಿಷಯವನ್ನು ಆಧರಿಸಿ ಕೆ.ಜಿ.ಎನ್ ಮಿತ್ತೂರ್ ಇದರ ವಿದ್ಯಾರ್ಥಿ ಬಹು!ಶಾಹುಲ್ ಹಮೀದ್ ಮುಸ್ಲಿಯಾರ್ ಕನ್ಯಾಡಿ ತರಗತಿ ನಡೆಸಿದರು.

ಪ್ರಸುತ್ತ ತರಗತಿ ನಡೆಸಬೇಕಾಗಿದ್ದ ದಾರುಲ್ ಇರ್ಷಾದ್ ಮಾಣಿಯ ಮುದರ್ರಿಸ್ ಹುಸೈನ್ ಅಹ್ಸನಿ ಅಲ್-ಮುಈನಿ ಮಾರ್ನಾಡ್ ಉಸ್ತಾದರು ತನ್ನ ವ್ಯಯಕ್ತಿಕ ಕಾರಣದಿಂದಾಗಿ ತರಗತಿಗೆ ಹಾಜರಾಗಲಾಗದೆ ಉಸ್ತಾದರ ಶಿಷ್ಯ ಬಹು!ಶಾಹುಲ್ ಹಮೀದ್ ಮುಸ್ಲಿಯಾರ್ ಕನ್ಯಾಡಿ ತರಗತಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಹಾಜಿ!ಅಬ್ದುಲ್ ಲತೀಫ್ ಹಿಮಮಿ,ಜನಾಬ್!ಹನೀಫ್ ಎಂ.ಎ,ತಾಜುಲ್ ಉಲಮಾ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಜನಾಬ್!ಅಬ್ದುಲ್ ಹಮೀದ್ ಎಸ್.ಬಿ,ಸಂಘಟನಾ ಸಲಹೆಗಾರ ಜನಾಬ್!ಆದಂ ಟಿ.ಎ,ಜೊತೆ ಕಾರ್ಯದರ್ಶಿ ಅಮೀನ್ ಟಿ.ಎ,ಫಯಾಝ್.ಬಿ,ಕ್ಯಾಂಪಸ್ ಕಾರ್ಯದರ್ಶಿ ತೌಸೀಫ್ ಕೆ.ಪಿ ಹಾಗು ಹಲವಾರು ಸಂಘಟನಾ ಕಾರ್ಯಕರ್ತರು ಮತ್ತು ಊರ ದೀನೀ ಪ್ರೇಮಿಗಳು ಉಪಸ್ಥರಿದ್ದರು.
SSF ತುಂಬೆ ಶಾಖೆಯ ಪ್ರ.ಕಾರ್ಯದರ್ಶಿ ಜನಾಬ್!ನೌಶಾದ್ ತುಂಬೆ ಕಾರ್ಯಕ್ರಮವನ್ನು ನಿರೊಪಿಸಿದರು.

ವರದಿ:-
ಇರ್ಫಾಝ್ ತುಂಬೆ

error: Content is protected !! Not allowed copy content from janadhvani.com