ಬೆಂಗಳೂರು: ಕರ್ನಾಟಕ ರಾಜ್ಯ SSF ಅಕ್ಟೋಬರ್ ತಿಂಗಳಲ್ಲಿ ಯೌವ್ವನ ಮರೆಯಾಗುವ ಮುನ್ನ ಎಂಬ ಧ್ಯೇಯ ವಾಕ್ಯದಡಿ ನಡೆಸಲಿರುವ ಯುನಿಟ್ ಸಮ್ಮೇಳನದ ಲಾಂಛನವನ್ನು ಅಂತರ್ರಾಷ್ಟ್ರೀಯ ವಿದ್ವಾಂಸ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾ ಇದರ ನಾಯಕ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಇಂದಿಲ್ಲಿ ಬಿಡುಗಡೆ ಗೊಳಿಸಿದರು.
ಅಕ್ಟೋಬರ್10 ರಿಂದ 30 ರ ವರೆಗೆ ರಾಜ್ಯದಾದ್ಯಂತ ಸಾವಿರಾರು ಯುನಿಟ್ ಗಳಲ್ಲಿ ಯುವ ಶಕ್ತಿಯನ್ನು ಸಂಘಟಿಸುವ ಮೂಲಕ ಸಭ್ಯ ಸಮಾಜವನ್ನು ರೂಪಿಸಲು SSF ಈ ಸಮ್ಮೇಳನ ವನ್ನು ಹಮ್ಮಿಕೊಂಡಿದ್ದು ಸುನ್ನೀ ಕ್ರಾಂತಿಯ ಹೊಸ ಅಲೆಯನ್ನು ಎಬ್ಬಿಸಲಿದೆ.
ಕಾರ್ಯಕ್ರಮದಲ್ಲಿ SSF ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು, ಇಹ್ಸಾನ್ ಕರ್ನಾಟಕ ಇದರ ಚೇರ್ಮನ್ ಮೌಲಾನಾ ಶಾಫೀ ಸ ಅದಿ ಬೆಂಗಳೂರು, SSA ಖಾದರ್ ಹಾಜಿ ಬೆಂಗಳೂರು, ಹಾಗೂ SSF ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Nice