janadhvani

Kannada Online News Paper

ಶಾರ್ಜಾ-ದುಬೈ ಸಂಚಾರ ಸುಲಭಗೊಳಿಸಲು ಹೊಸ ಸೇತುವೆ

ದುಬೈ: ಶಾರ್ಜಾ-ದುಬೈ ಸಾರಿಗೆಯನ್ನು ಸುಲಭಗೊಳಿಸಲು ಹೊಸ ಸೇತುವೆಯನ್ನು ತೆರೆಯಲಾಗಿದೆ.ರಜೆ ಮುಗಿದು ಒಂದು ದಶಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಮರಳಿದ ಮೊದಲ ದಿನ, ದೇಶದ ಅನೇಕ ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತೆ ಅನುಭವಿಸಿತು.ಈ ಕಾರಣಕ್ಕಾಗಿ ಎಮಿರೇಟ್ಸ್ ರೋಡ್ ಮತ್ತು ಶಾರ್ಜಾ-ಮಲೀಹ ರಸ್ತೆಯನ್ನು ಸಂಚಾರಕ್ಕೆ ಸಂಪರ್ಕಿಸುವ ಅಲ್ ಬಾದೀ ಇಂಟರ್ಚೇಂಜ್ ಅನ್ನು ಸಂಚಾರಕ್ಕಾಗಿ ತೆರೆಯಲಾಯಿತು.

ಎರಡು ಇಮಾರಾತ್‌ಗಳನ್ನು ಬಂಧಿಸುವ ಇಂಟರ್ ಚೇಂಜ್‌ನ ನಿರ್ಮಾಣವು ವರ್ಷದ ಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವಾಲಯ ಹೇಳಿದೆ. ಈ ಮೂಲಕ ಗಂಟೆಗೆ 17,700 ಕಾರುಗಳು ಪ್ರಯಾಣಿಸಲು ಸಾಧ್ಯವಾಗಲಿದೆ.ಸೇತುವೆಯ ಅಧಿಕೃತ ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ.ಅಬ್ದುಲ್ಲಾ ಅಲ್-ನುಐಮಿ ಹೇಳಿದರು.

ಎರಡು ಕಿಲೋಮೀಟರ್ಗಳ ಮೂರು ಲೈನ್‌ಗಳ ರಸ್ತೆಯನ್ನೂ ಯೋಜನೆ ಹೊಂದಿದೆ. ಟ್ರಕ್ಕುಗಳಿಂದ ಉಂಟಾಗುವ ಸಂಚಾರ ದಟ್ಟಣೆ ತಪ್ಪಿಸಲು ಹೊಸ ಯೋಜನೆಯು ನೆರವಾಗಲಿದೆ.ಯೋಜನೆಯ ವೆಚ್ಚ ಸುಮಾರು 20 ಕೋಟಿ ದಿರ್ಹಂ ಎನ್ನಲಾಗಿದೆ. ಯೋಜನೆಯು ಮುಗಿದ ನಂತರ ಶಾರ್ಜಾ-ದುಬೈ ಪ್ರಯಾಣದ ಸಮಯ ಕೂಡ ಕಡಿಮೆಯಾಗಲಿದೆ.

error: Content is protected !! Not allowed copy content from janadhvani.com