ದೋಹಾ:ಉದ್ಯೋಗ ಸಂಬಂಧಿತ ಭಿನ್ನಾಭಿಪ್ರಾಯ ಉಂಟಾದಲ್ಲಿ ನ್ಯಾಯಯುತವಾಗಿ ಕಾರ್ಮಿಕರಿಗೆ ಲಭಿಸಬೇಕಾದ ಹಣವನ್ನು ಕಾರ್ಮಿಕರ ಸಹಕಾರ ವಿಮಾ ನಿಧಿಯಿಂದ ನೀಡಲಾಗುವುದು ಎಂದು ಅಭಿವೃದ್ಧಿ ಮತ್ತು ಕಾರ್ಮಿಕ, ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಈಸಾ ಬಿನ್ ಸಾದ್ ಅಲ್ ಜಫಾಲಿ ಅಲ್ ನುಐಮಿ ಹೇಳಿದ್ದಾರೆ.
ಕ್ಯಾಬಿನೆಟ್ ಈ ಕರಡು ಕಾನೂನನ್ನು ಅನುಮೋದಿಸಿದೆ. ಅಮೀರ್ ಶೈಖ್ ತಮೀಮ್ ಬಿನ್ ಹಮದ್ ಅಲ್ ಥಾನಿಯವರಿಗೆ ಸಲ್ಲಿಸಬೇಕಾದ ಕರಡುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಲ್-ನುಐಮಿ ಹೇಳಿದರು.
ಉದ್ಯೋಗದಾತನಿಗೆ ಹೊಣೆಗಾರಿಕೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದದ್ದಲ್ಲಿ, ನಿಧಿಯಿಂದ ಕಾರ್ಮಿಕರಿಗೆ ಹಣ ಪಾವತಿಸಲಾಗುತ್ತದೆ.ಕೆಲಸಗಾರನಿಗೆ ತನ್ನ ಊರಿಗೆ ಮರಳಲು ಸೌಕರ್ಯ ಕೂಡ ಲಭಿಸಲಿದೆ. ಇದನ್ನು ಮಾಲೀಕರಿಂದ ನಂತರ ಪಡೆಯಲಾಗುತ್ತದೆ.
ಕೆಲಸಗಾರರಿಗೆ ಆಟದ ಮೈದಾನಗಳು ಮತ್ತು ಇತರ ಮನರಂಜನಾ ಸೌಲಭ್ಯಗಳಿಗೂ ಕಾರ್ಮಿಕರ ನಿಧಿಯಿಂದ ಧನ ಸಹಾಯ ನೀಡಲಾಗುತ್ತದೆ.ಸರ್ಕಾರ ನೀಡುವ ಅನುದಾನದ ಜೊತೆಗೆ, ಹೂಡಿಕೆಗಳಿಂದ ಲಭಿಸುವ ಆದಾಯವನ್ನೂ ನಿಧಿಗೆ ನೀಡಲಾಗುತ್ತದೆ.ಕಾರ್ಮಿಕರ ಹಕ್ಕುಗಳಿಗಾಗಿ ಜಾರಿಗೊಳಿಸಲಾದ ಕಾನೂನುಗಳ ಹೊರತಾಗಿ ನಿಧಿಯನ್ನು ರಚಿಸಲಾಗಿದೆ.
ಕತಾರ್ ಕಾರ್ಮಿಕರಿಗೆ ಸುರಕ್ಷಿತ ಉದ್ಯೋಗ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಈಸಾ ಬಿನ್ ಸಾದ್ ಅಲ್ ಜಫಾಲಿ ಅಲ್ ನುಐಮಿ ಹೇಳಿದರು.