ಆಗಸ್ಟ್ 16; ಉಪ್ಪಿನಂಗಡಿ ಪರಿಸರದಲ್ಲಿ ಮಳೆಯ ಅಬ್ಬರ ಮತ್ತೆ ಜೋರಾಗಿದ್ದು,ಕುಪ್ಪೆಟ್ಟಿ ಸಮೀಪದ ತಣ್ಣೀರುಪಂತ ಗ್ರಾಮಕ್ಕೊಳಗೊಂಡ ಬೋವು ಮುಂಚೇರಿ ಬಳಿ ಇರುವ ಸೇತುವೆ ಮುಳುಗಿ ಅಪಾಯದ ಮಟ್ಟವನ್ನು ಮೀರಿ ನೀರು ಹರಿಯುತ್ತಿದೆ.ಇದರಿಂದ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು,ಸೇತುವೆ ಮುಳುಗಿ ಕೂಲಿ ಕಾರ್ಮಿಕರಿಗೂ,ಸಂಚಾಲಕರಿಗೂ ರಸ್ತೆ ದಾಟಲು ಅಡಚಣೆವಾಗಿದೆ, ಹಲವು ಮನೆ, ಕೃಷಿ ತೋಟಗಳಿಗೆ ನೀರು ನುಗ್ಗಿದೆ.
ಇಲ್ಲಿ ಇದೇ ತರಹ ಮಳೆ ಎದುರಾದರೆ ಹಲವಾರು ಕುಟುಂಬಗಳ ಮನೆಗಳು ಭಾಗಶಃಮುಳುಗಡೆಯಾವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಊರಿನ ಸಾರ್ವಜನಿಕರು ಮತ್ತು ಸೇತುವೆ ಪಕ್ಕದ ಮನೆಯವರಾದ H.ಯೂಸುಫ್, ಆದಮ್ ರವರು ದುಃಖಪ್ರಕಟಿಸುವ ಮೂಲಕ ತಿಳಿಸಿದ್ದಾರೆ.