janadhvani

Kannada Online News Paper

ಮಕ್ಕಾ ಕೆಸಿಎಫ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಮಕ್ಕಾ: ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಹಜ್ಜಾಜ್ ಗಳ ಸಮ್ಮುಖದಲ್ಲಿ ಭಾರತದ 72ನೇ ಸ್ವಾತಂತ್ರ್ಯೋತ್ಸವವನ್ನು ಅಝೀಝಿಯಾದಲ್ಲಿ ಇಂಡಿಯನ್ ಹಜ್ಜ್ ಬಿಲ್ಡಿಂಗ್ 106 ರಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.ದ. ಕ ಜಿಲ್ಲೆ SYS ಉಪಾಧ್ಯಕ್ಷರು ಹಂಝ ಮದನಿ ಮಿತ್ತೂರು ಕೆಸಿಎಫ್ ನ ಕಾರ್ಯವೈಖರಿಗಳನ್ನು ಶ್ಲಾಘಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.ರಾಜ್ಯ ಎಸ್ಸೆಸ್ಸೆಫ್ ಇಹ್ಸಾನ್ ಪ್ರ. ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸಂದೇಶ ಭಾಷಣ ನಡೆಸಿದರು.ದ.ಕ.ಜಿಲ್ಲೆ SYS ಅಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಕೆಸಿಎಫ್ ಕತ್ತಾರ್ ನ್ಯಾಷನಲ್ ಅಧ್ಯಕ್ಷ ರಹೀಮ್ ಸಅದಿ, ಮಂಗಳೂರು ವಿಶ್ವವಿದ್ಯಾನಿಲಯ ಪ್ರೊಫೆಸರ್ ಡಾ. ಇಸ್ಮಾಯಿಲ್ ನಡುಪದವು ಶುಭ ಹಾರೈಸಿ ಮಾತನಾಡಿದರು.ವೇದಿಕೆಯಲ್ಲಿ ದ.ಕ ಜಿಲ್ಲೆ SSF ಸದಸ್ಯರು ಸಯ್ಯಿದ್ ಖುಬೈಬ್ ತಂಙಲ್ ಉಳ್ಳಾಲ, HVC ಹಜ್ಜ್ ತರಬೇತಿದಾರ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು, HVC ಮಕ್ಕತುಲ್ ಮುಕರ್ರಮಃ ಸೆಕ್ಟರ್ ನೇತಾರ ಮೂಸಾ ಹಾಜಿ ಕಿನ್ಯ, ಇಸ್ಮಾಯಿಲ್ ಮುಸ್ಲಿಯಾರ್ ಇಂದ್ರಾಜೆ, ಅಬ್ಬಾಸ್ ಮದನಿ ನೂಜಿ, ಅಬ್ದುಲ್ಲಾ ಮುಸ್ಲಿಯಾರ್ ಪಟ್ಟೋರಿ, ಕೆಸಿಎಫ್ ಮಕ್ಕತುಲ್ ಮುಕರ್ರಮಃ HVC ವಾಲೇಂಟೀರ್ ಕೋರ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರಗೀತೆಯೊಂದಿಗೆ ಆರಂಭಿಸಿದ ಕಾರ್ಯಕ್ರಮವನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ವಂದಿಸಿದರು.

error: Content is protected !! Not allowed copy content from janadhvani.com