ರಿಯಾದ್: ಸೌದಿ ಅರೇಬಿಯಾದಲ್ಲಿ ದುಲ್ ಹಜ್ಜ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಮೇ 27 ಬುಧವಾರದಂದು ಬಕ್ರೀದ್ (ಈದ್ ಉಲ್ ಅಝ್ಹಾ) ಆಚರಿಸಲಾಗುವುದು ಎಂದು ಧಾರ್ಮಿಕ ವ್ಯವಹಾರಗಳ ಇಲಾಖೆ ಘೋಷಿಸಿದೆ. ಅರಾಫಾ ಸಂಗಮವು ಮೇ 26 ಮಂಗಳವಾರದಂದು ನಡೆಯಲಿದೆ. ಸೌದಿ ಅರೇಬಿಯಾವನ್ನು ಅವಲಂಬಿಸುವ ಕುವೈತ್, ಯುಎಇ, ಖತಾರ್, ಬಹರೈನ್ ರಾಷ್ಟ್ರಗಳಲ್ಲೂ ಬುಧವಾರ ಈದುಲ್ ಅದ್ ಹಾ ಆಚರಿಸಲಾಗುತ್ತದೆ.
ಒಮಾನ್ನಲ್ಲೂ ದುಲ್ ಹಜ್ಜ್ ತಿಂಗಳ ಚಂದ್ರ ದರ್ಶನವಾಗಿದ್ದು, ಮೇ. 27 ಬುಧವಾರದಂದು ಬಕ್ರೀದ್ (ಈದ್ ಉಲ್ ಅಝ್ಹಾ) ಆಚರಿಸಲಾಗುವುದು ಎಂದು ಒಮಾನ್ ಧಾರ್ಮಿಕ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.
ಹಜ್ ವಿಧಿವಿಧಾನಗಳಲ್ಲಿ ಪ್ರಮುಖವಾದ ಅರಫಾತ್ ಸಂಗಮವು ಮಂಗಳವಾರದಂದು ನಡೆಯಲಿದ್ದು, ಮೇ 25 ರ ಸೋಮವಾರದಂದು ಹಜ್ ಯಾತ್ರಿಕರು ಮಿನಾಗೆ ತೆರಳಲಿದ್ದಾರೆ. ಹಜ್ ಯಾತ್ರೆಗಾಗಿ ವಿಶ್ವದ ವಿವಿಧ ಭಾಗಗಳಿಂದ ಲಕ್ಷಾಂತರ ವಿಶ್ವಾಸಿಗಳು ಈಗಾಗಲೇ ಮಕ್ಕಾಗೆ ಆಗಮಿಸಿದ್ದಾರೆ.
ಈದ್ ಅಲ್-ಅದ್ಹಾ ಆಚರಣೆಗಾಗಿ ಗಲ್ಫ್ ರಾಷ್ಟ್ರಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ವಾರಾಂತ್ಯ ರಜೆಗಳೊಂದಿಗೆ ಸತತ ಐದು ದಿನಗಳ ರಜೆಗಳು ಲಭಿಸಲಿದೆ.
















ಇನ್ನಷ್ಟು ಸುದ್ದಿಗಳು
ಜೈಲು ಕಂಬಿಗಳ ಹಿಂದೆ ನರಳುವ ಜೀವಗಳು: ಕರಾಳ ಮಾದಕವಸ್ತು ಜಾಲದ ಕ್ರೂರ ಮುಖ
ಯೆನೆಪೋಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಉಸ್ತಾದರಿಗೆ ಗೌರವ ಡಾಕ್ಟರೇಟ್
ಇಂದು ಕಾಪುವಿನಲ್ಲಿ ಐತಿಹಾಸಿಕ ಸಮಸ್ತ ತಾತ್ವಿಕ ಸಮಾವೇಶ- ಎಸ್ಸೆಸ್ಸೆಫ್ ಕಾಪು ಡಿವಿಷನ್ ಯಶಸ್ವಿಗೆ ಕರೆ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ರಾಷ್ಟ್ರಮಟ್ಟದ ಹ್ಯಾಕಥಾನ್ನಲ್ಲಿ ಅಫ್ನಾಜ್ಗೆ ದ್ವಿತೀಯ ಸ್ಥಾನ
ಬಿಳಿ ಬಣ್ಣದ ಮದುವೆ ಉಡುಗೆಯನ್ನು ಹೊದಿಸಿ ಅಸ್ಸಾ ರಮ್ಸಿಗೆ ಕಣ್ಣೀರಿನ ವಿದಾಯ