janadhvani

Kannada Online News Paper

ಮಿತ್ತೂರು ಕೆಜಿಎನ್ ನಲ್ಲಿ ಸ್ವಾತಂತ್ರ್ಯತ್ಸೋವ

ಮಾಣಿ: ಇಲ್ಲಿನ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ದೇಶದ 72 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು. DIEC ಸೌದಿ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅನ್ವರ್ ಹುಸೈನ್ ಗೂಡಿನಬಳಿ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಕೆಜಿಎನ್ ಪಿಯು ಕಾಲೇಜು ಪ್ರಾಂಶುಪಾಲ ಸಿದ್ದೀಕ್ ಅಕ್ಬರ್ ಹಿರೆಬಂಡಾಡಿ ಉದ್ಘಾಟಿಸಿದರು.

ಡಿಐಇಸಿ ಸೌದಿ ಅರೆಬಿಯಾ ನ್ಯಾಷನಲ್ ಸೆಕ್ರಟರಿ ಅಶ್ರಫ್ ನೌಶಾದ್ ಪೊಳ್ಯ, ದಾರುಲ್ ಇರ್ಶಾದ್ ಮಸ್ಕತ್ ಅಧ್ಯಕ್ಷ ಉಮರ್ ಸಖಾಫಿ ಶುಭ ಹಾರೈಸಿದರು. ಡಿಐಇಸಿ ದಮ್ಮಾಮ್ ಟ್ರೆಸರರ್ ಅಶ್ರಫ್ ಬೆಳ್ಳೂರು, ಇರ್ಶಾದಿಯ್ಯ ಹಿಫ್ಳುಲ್ ಖುರ್‌ಆನ್ ಕಾಲೇಜಿನ ಪ್ರಾಂಶುಪಾಲ ಹಾಫಿಳ್ ಹನೀಫ್ ಸ‌ಅದಿ ಮಠ, ದ‌ಅವಾ ಕಾಲೇಜು ಮುದರ್ರಿಸ್ ಸಯ್ಯಿದ್ ಸ್ವಲಾಹುದ್ದೀನ್ ಅದನಿ, ಇಸ್ಮಾಈಲ್ ಮಿತ್ತೂರು ಮುಂತಾದವರು ಉಪಸ್ಥಿತರಿದ್ದರು.

ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಮೇನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಉದ್ಘಾಟಿಸಿದರು.
ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶ್ರಫ್ ಬಿ.ಸಿ.ರೊಡ್ ವಂದಿಸಿದರು, ಸ್ವಾದಿಖ್ ಮುಈನಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com