janadhvani

Kannada Online News Paper

ಮಕ್ಕಾ ಪರಿಸರದ ಬೀದಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮ

ಮಕ್ಕಾ: ಮಕ್ಕಾ ಮತ್ತು ಪರಿಸರದಲ್ಲಿ ಕಾರ್ಯಾಚರಿಸುವ ಬೀದಿ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬೀದಿ ಬದಿಗಳಲ್ಲಿ ಮಾರಾಟ ಮಾಡಲಾಗುವ ಆಹಾರ, ಪಾನೀಯಗಳನ್ನು ಖರೀದಿಸದಂತೆ ಅಧಿಕಾರಿಗಳು ಯಾತ್ರಿಕರನ್ನು ಕೇಳಿಕೊಂಡಿದ್ದಾರೆ.

ಬೀದಿ ಬದಿಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಪಾನೀಯಗಳಲ್ಲಿ ಸೋಂಕು ಸೇರಿದಂತೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಲಿದೆ ಎಂದು ಸೌದಿ ಫುಡ್ ಆ್ಯಂಡ್ ಡ್ರಗ್ ಅಥಾರಿಟಿ ಎಚ್ಚರಿಸಿದೆ.

ಮಾನದಂಡಗಳ ಪ್ರಕಾರ ಪರವಾನಗಿ ಪಡೆದು ಕಾರ್ಯನಿರ್ವಹಿಸುವ ಹೋಟೆಲ್ ಗಳಿಂದ ಮಾತ್ರ ಆಹಾರ ಪದಾರ್ಥಗಳನ್ನು ಖರೀದಿಸಬಹುದು. ಚೆನ್ನಾಗಿ ಬೇಯಿಸದ ಮಾಂಸ ಮತ್ತು ಹಾಲು ತಿನ್ನಬಾರದು.ಬಣ್ಣ ಮತ್ತು ರುಚಿಯಿಂದ ಭಿನ್ನವಾಗಿರುವ ಆಹಾರವನ್ನು ತಿನ್ನಕೂಡದು. ಬಾಟಲೀಕೃತ ಕುಡಿಯುವ ನೀರನ್ನು ಮಾತ್ರ ಕುಡಿಯಲು ಬಳಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಯಾತ್ರಿಕರು ವೈದ್ಯರು ಸೂಚಿಸಿದಂತೆ ಮಾತ್ರ ಔಷಧಿಗಳನ್ನು ಬಳಸಬೇಕು. ಅದೇ ರೋಗಲಕ್ಷಣವನ್ನು ಹೊಂದಿದವರು ವೈದ್ಯರ ಸಲಹೆ ಇಲ್ಲದೆ ಇತರರಿಂದ ಔಷಧಿ ಪಡೆದು ಬಳಸಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಏತನ್ಮಧ್ಯೆ, ರಸ್ತೆ ಬದಿಯ ಮಾರಾಟಗಾರರ ವಿರುದ್ಧ ತಪಾಸಣೆ ನಡೆಯುತ್ತಿದೆ ಎಂದು ಮಕ್ಕಾ ಪುರಸಭೆ ತಿಳಿಸಿದೆ. ಪೊಲೀಸ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಈ ತಪಾಸಣೆ ನಡೆಸಲಾಗುತ್ತದೆ ಎಂದು ಪುರಸಭೆ ತಿಳಿಸಿದೆ.

error: Content is protected !! Not allowed copy content from janadhvani.com