janadhvani

Kannada Online News Paper

ಮುಂಜಾನೆ ರಾಡ್ ಹಿಡಿದು ರೋಡ್‍ಗೆ ಇಳಿಯುವ ಕಳ್ಳರು-ಪುಟ್ಟ ಪುಟ್ಟ ಅಂಗಡಿಗಳೇ ಟಾರ್ಗೆಟ್

ಬೆಂಗಳೂರು: ಒಂದು ವಾರದಿಂದ ನಿರಂತರವಾಗಿ ಸರಣಿ ಕಳ್ಳತನ ಮಾಡಿ ಒಂದೇ ಪ್ರದೇಶದ 7 ಅಂಗಡಿಗಳಲ್ಲಿ ಹಣ, ವಸ್ತುಗಳನ್ನು ದೋಚಿರುವ ಘಟನೆ ನಗರದ ವೈಯ್ಯಾಲಿಕಾವಲ್ ಬಳಿ ನಡೆದಿದೆ.

ಕಳೆದ ಒಂದು ವಾರದಿಂದಲೂ ವೈಯ್ಯಾಲಿ ಕಾವಲ್ ಪ್ರದೇಶದ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಈ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ದೊರೆತಿರುವ ದೃಶ್ಯಗಳಲ್ಲಿ ಬೆಳ್ಳಂಬೆಳಗ್ಗೆ ಕೈಯಲ್ಲಿ ರಾಡ್ ಹಿಡಿದು, ತಲೆಗೆ ಟೋಪಿ ಹಾಕಿ ಹೊರಡುವ ಖದೀಮರು ಸಣ್ಣ ಸಣ್ಣ ಅಂಗಡಿಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ನಡೆಸಿದ್ದಾರೆ.

ಕಳ್ಳತನ ಮಾಡುವ ವೇಳೆ ಜಾಗಿಂಗ್ ಹೋಗುವವರನ್ನು ಗಮನಿಸಿ ಅಂಗಡಿ ಮಾಲೀಕನಂತೆ ವರ್ತಿಸುವ ಖದೀಮರು ಬಳಿಕ ರಸ್ತೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಳಿಕ ರಾಡ್ ನಿಂದ ಅಂಗಡಿ ಲಾಕ್ ಒಡೆದು ಒಳಗೆ ಪ್ರವೇಶ ಮಾಡಿ ಹಣ, ಬೆಲೆ ಬಾಳುವ ವಸ್ತುಗಳನ್ನು ಕೊಂಡ್ಯೊಯುತ್ತಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರು ಈ ಕುರಿತು ದೂರು ನೀಡಿದರೂ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೇ ಎಷ್ಟೇ ಬಾರಿ ದೂರು ನೀಡಲು ಹೋದರೂ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಈ ಪ್ರದೇಶದಲ್ಲಿ ಚೀಟಿ ಹಾಕಿ ಅಂಗಡಿ ಮಾಡಿದ್ದ ವ್ಯಕ್ತಿಯ ಅಂಗಡಿಯಲ್ಲೂ ಕಳ್ಳತನ ಮಾಡಿರುವ ಖದೀಮರು ಎಸ್ಕೇಪ್ ಆಗಿದ್ದಾರೆ. ಇದರಿಂದ ಹಣವೂ ಇಲ್ಲದೆ ಅಂಗಡಿಯಲ್ಲಿ ವಸ್ತುವೂ ಇಲ್ಲದೇ ಹತಾಶರಾಗಿದ್ದಾಗಿ ಮಾಲೀಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com