janadhvani

Kannada Online News Paper

ಜೆಟ್ ಏರ್ವೇಸ್: ಟಿಕೆಟ್ ದರದಲ್ಲಿ 30% ಇಳಿಕೆ

ಕುವೈತ್ ಸಿಟಿ: ಜೆಟ್ ಏರ್ವೇಸ್ ಯಾತ್ರಾ ದರದಲ್ಲಿ ಕಡಿತವನ್ನು ಘೋಷಿಸಿದೆ.ಜೆಟ್ ಏರ್ವೇಸ್‌ನ ಗಲ್ಫ್ ಮಿಡಲ್ ಈಸ್ಟ್ ಆಫ್ರಿಕಾ ಉಪಾಧ್ಯಕ್ಷ ಶಕೀರ್ ಕಂಡಾವಾಲ, ಈ ತಿಂಗಳ 17 ರಿಂದ 23 ವರೆಗೆ ಪ್ರಯಾಣ ದರಗಳಲ್ಲಿ ಶೇ. 30ರಷ್ಟು ಕಡಿತಗೊಳಿಸುವುದಾಗಿ ಹೇಳಿದ್ದಾರೆ.

ಕಡಿತವು ಭಾರತದ ಹಲವು ನಗರಗಳು ಸೇರಿದಂತೆ ಬ್ಯಾಂಕಾಕ್, ಹಾಂಗ್ ಕಾಂಗ್, ಕಾಠ್ಮಂಡು, ಸಿಂಗಾಪುರ ಮುಂತಾದೆಡೆಗಳಿಗೂ ಅನ್ವಯವಾಗಲಿದೆ.

ಈ ಸೌಲಭ್ಯ ಪಡೆಯಲು, ಜೆಟ್ ಏರ್ವೇಸ್ ವೆಬ್ಸೈಟ್ ಮೂಲಕ ನೇರವಾಗಿ ಮತ್ತು ಏಜೆನ್ಸಿ ಮೂಲಕವೂ ಟಿಕೆಟ್ ಕಾಯ್ದಿರಿಸ ಬಹುದಾಗಿದೆ. ಪ್ರಯಾಣ ಮತ್ತು ಮರುಪ್ರಯಾಣಕ್ಕೂ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com