janadhvani

Kannada Online News Paper

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ- ಡಾ. ಜಿ. ಪರಮೇಶ್ವರ್ ಡಿಸಿಎಂ

ಈ ಮೂಲಕ ಅವರ ಸುದೀರ್ಘ ರಾಜಕೀಯ ಜೀವನದ ಮುಖ್ಯಮಂತ್ರಿ ಕನಸು ನನಸಾದಂತಾಗಿದ್ದು, ರಾಜ್ಯದಲ್ಲಿ ಅವರ ಆಡಳಿತ ಇಂದಿನಿಂದ ಆರಂಭಗೊಂಡಿದೆ.

ಬೆಂಗಳೂರು: ಕರ್ನಾಟಕದ 24 ನೇ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು‌.

4.15 ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಪ್ರಮಾಣ ವಚನ ಬೋಧಿಸಿದರು. ಇದಕ್ಕೆ ಮೊದಲು ಅಜ್ಜಯ್ಯನ ಫೋಟೋಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ತೆಲಂಗಾಣ ಪಿಎಂ ರೇವಂತ ರೆಡ್ಡಿ, ಕೇರಳ ಸಿಎಂ ಸತೀಶನ್, ಹಿಮಾಲಯ ಪ್ರದೇಶ ಸಿಎಂ ಸುಕ್ವಿಂದರ್ ಸಿಂಗ್ ಸುಕು ಹಾಗೂ ಪ್ರಮುಖರು ಭಾಗಿಯಾಗಿದ್ದರು.

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಧರ್ಮಗುರುಗಳ ಆಶೀರ್ವಾದ
ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುವುದಕ್ಕೆ ಮುನ್ನ ವಿವಿಧ ಧರ್ಮ ಗುರುಗಳು ಹಾಗೂ ವಿವಿಧ ಜಾತಿ, ಸಮುದಾಯದ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದುಕೊಂಡರು. ಕೆಲವು ಸ್ವಾಮೀಜಿಗಳು ತಲೆಗೆ ಹೂ ಹಾಕಿ ಹರಸಿದರು.

ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಯ ಕಾಲು ಮುಟ್ಟಿ ಇದೇ ವೇಳೆ ಡಿಕೆ ಶಿವಕುಮಾರ್ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಡಿಕೆ ಶಿವಕುಮಾರ್ ಅವರಿಗೆ ಶುಭ ಹಾರೈಸಿದರು.ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಭೇಟಿ ಮಾಡಿ ಹಸ್ತಲಾಘವ ಮಾಡಿದರು.
ಸಂವಿಧಾನದ ಹೆಸರಿನಲ್ಲಿ ಭಕ್ತಿಪೂರ್ವಕ ಪ್ರಮಾಣವಚನ
ಪದಗ್ರಹಣ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಸಾಂಪ್ರದಾಯಿಕ ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ಜುಬ್ಬಾ ಧರಿಸಿ ಗಮನ ಸೆಳೆದರು. ಭಾರತದ ಸಂವಿಧಾನದ ಪುಸ್ತಿಕೆಯನ್ನು ಕೈಯಲ್ಲಿ ಹಿಡಿದುಕೊಂಡು, ತಮ್ಮ ಆರಾಧ್ಯ ದೈವ ‘ಗಂಗಾಧರ ಅಜ್ಜ’ ಅವರ ಹೆಸರಿನಲ್ಲಿ ಅವರು ಭಕ್ತಿಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಅವರ ಸುದೀರ್ಘ ರಾಜಕೀಯ ಜೀವನದ ಮುಖ್ಯಮಂತ್ರಿ ಕನಸು ನನಸಾದಂತಾಗಿದ್ದು, ರಾಜ್ಯದಲ್ಲಿ ಅವರ ಆಡಳಿತ ಇಂದಿನಿಂದ ಆರಂಭಗೊಂಡಿದೆ.

14 ಸಚಿವರ ಮೊದಲ ಸಂಪುಟ ರಚನೆ: ಪರಮೇಶ್ವರ್‌ಗೆ ಡಿಸಿಎಂ ಪಟ್ಟ
ಮುಖ್ಯಮಂತ್ರಿಗಳ ಜೊತೆಗೆ ಒಟ್ಟು 14 ನಾಯಕರನ್ನೊಳಗೊಂಡ ಮೊದಲ ಹಂತದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ಪ್ರಮುಖ ನಾಯಕರ ಪಟ್ಟಿ:

  • ಡಾ.. ಜಿ. ಪರಮೇಶ್ವರ್ (ಉಪಮುಖ್ಯಮಂತ್ರಿ)
  • ಕೆ.ಎಚ್. ಮುನಿಯಪ್ಪ(ಸಚಿವ)
  • ಕೆ.ಜೆ. ಜಾರ್ಜ್(ಸಚಿವ)
  • ಎಂ.ಬಿ. ಪಾಟೀಲ್ (ಸಚಿವ)
  • ರಾಮಲಿಂಗಾರೆಡ್ಡಿ (ಸಚಿವ)
  • ಸತೀಶ್ ಜಾರಕಿಹೊಳಿ (ಸಚಿವ)
  • ಕೃಷ್ಣ ಬೈರೇಗೌಡ (ಸಚಿವ)
  • ಪ್ರಿಯಾಂಕ್ ಖರ್ಗೆ (ಸಚಿವ)
  • ಯು.ಟಿ. ಖಾದರ್ (ಸಚಿವ)
  • ಈಶ್ವರ್‌ ಖಂಡ್ರೆ (ಸಚಿವ)
  • ಡಾ. ಯತೀಂದ್ರ (ಸಚಿವ)
  • ಬೈರತಿ ಸುರೇಶ್ (ಸಚಿವ)
  • ಶರಣಪ್ರಕಾಶ್ ಪಾಟೀಲ್‌ (ಸಚಿವ)

ಲೋಕಭವನದಲ್ಲಿ ಹಬ್ಬದ ವಾತಾವರಣ: ಸಾಕ್ಷಿಯಾದ ರಾಷ್ಟ್ರೀಯ ಗಣ್ಯರು
ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಲೋಕಭವನದ ಗ್ಲಾಸ್ ಹೌಸ್ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿರಿ...