ಮಂಗಳೂರು/ಕಾಟಿಪಳ್ಳ: ಬೋಬಾಸ್ ಫ್ಯಾಮಿಲಿ ರಿಲೀಫ್ (BFR) 4ನೇ ಬ್ಲಾಕ್ ಕಾಟಿಪಳ್ಳ ಇದರ ಸ್ಥಾಪಕ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಶರೀಫ್ ಗಾಣದಬೆಟ್ಟು ಅವರ ಅಕಾಲಿಕ ನಿಧನಕ್ಕೆ ಬೋಬಾಸ್ ಫ್ಯಾಮಿಲಿ ರಿಲೀಫ್ ಸಂಸ್ಥೆಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು ನೇತೃತ್ವ ವಹಿಸುತ್ತಿದ್ದ ಶರೀಫ್ ಅವರು, ತಮ್ಮ ಜೀವನಪರ್ಯಂತ ಸಮಾಜ, ಸಮುದಾಯ ಹಾಗೂ ಕುಟುಂಬಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸಿದ್ದರು. ಅವರ ಸೇವೆ ಮತ್ತು ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯವಾಗಿತ್ತು ಎಂದು ಸಂಸ್ಥೆ ಸ್ಮರಿಸಿದೆ. ದೂರದ ದುಬಾಯಿಯಲ್ಲಿದ್ದರೂ ಊರಿನ ಜನರೊಂದಿಗಿನ ಸಂಪರ್ಕವನ್ನು ಕಳೆದುಕೊಳ್ಳದ ಅವರು, ಸದಾ ಜನರ ಕಷ್ಟ-ಸುಖಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು. ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಮೂಲಕ ಧಾವಿಸುತ್ತಿದ್ದ ಅವರ ಸಮಾಜಮುಖಿ ಸೇವೆಯನ್ನು ಬಿ.ಎಫ್.ಆರ್ ಸಂಸ್ಥೆಯು ಕೃತಜ್ಞತೆಯಿಂದ ನೆನೆದಿದೆ.
“ಸರ್ವಶಕ್ತನಾದ ಅಲ್ಲಾಹನು ಮೃತರ ಇಹಲೋಕದ ಸೇವೆಗಳನ್ನು ಸ್ವೀಕರಿಸಿ, ಅವರ ಪಾಪಗಳನ್ನು ಮನ್ನಿಸಲಿ. ಅವರಿಗೆ ಉನ್ನತವಾದ ಜನ್ನಾತುಲ್ ಫಿರ್ದೌಸ್ ಭಾಗ್ಯವನ್ನು ಕರುಣಿಸಲಿ. ಹಾಗೆಯೇ ಅವರ ಅಗಲಿಕೆಯ ದುಃಖದಲ್ಲಿರುವ ಕುಟುಂಬಸ್ಥರಿಗೆ, ಬಂಧು-ಮಿತ್ರರಿಗೆ ಈ ನೋವನ್ನು ಭರಿಸುವ ಸಹನಾ ಶಕ್ತಿಯನ್ನು ನೀಡಲಿ” ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುವುದಾಗಿ ಬಿ.ಎಫ್.ಆರ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಂತಾಪ ಸೂಚಿಸಿದವರು:
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
BOBA’S FAMILY RELIEF (BFR)
4ನೇ ಬ್ಲಾಕ್, ಕಾಟಿಪಳ್ಳ, ಮಂಗಳೂರು.


















انا لله و انا اليه راجعون