ನರಿಂಗಾನ: ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಶಿಲ್ಪಿ, ಪ್ರಖ್ಯಾತ ವಿದ್ವಾಂಸ ಹಾಗೂ ಬಹುಮುಖ ಸಂಘಟನಾ ಚತುರರಾಗಿದ್ದ ಮರ್ಹೂಮ್ ಶೈಖುನಾ ಅಬ್ಬಾಸ್ ಮುಸ್ಲಿಯಾರ್ (ಶರಫುಲ್ ಉಲಮಾ) ರವರ 7ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮವು ಇದೇ ಬರುವ ಮೇ 13 ಮತ್ತು 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಶೈಖುನಾ ಉಸ್ತಾದ್ ರವರ ಆದರ್ಶಪ್ರಾಯ ಬದುಕು, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ನೀಡಿದ ಅಪಾರ ಕೊಡುಗೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಇದರೊಂದಿಗೆ ಸುನ್ನತ್ ಜಮಾಅತಿನ ಆದರ್ಶಗಳ ಪ್ರತಿಪಾದನೆ ಹಾಗೂ ದ್ಸಿಕ್ರ್, ಸ್ವಲಾತ್, ಬುರ್ದಾ ಮಜ್ಲಿಸ್ಗಳ ಮೂಲಕ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಎಪ್ರಿಲ್ 6 ರಂದು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಕಾರ್ಯಕ್ರಮದ ನಿರ್ವಹಣೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚೆಯರ್ಮಾನ್:ಹಾಜಿ ಎನ್. ಎಸ್. ಕರೀಂ
ಕನ್ವೀನರ್:ಕೆ. ಎಂ. ಕೆ. ಮಂಜನಾಡಿ
ಕೋಶಾಧಿಕಾರಿ: ಮುಹಮ್ಮದ್ ಹಾಜಿ ಬೋಳಿಯಾರ್
ವಿವಿಧ ಉಪಸಮಿತಿಗಳ ಉಸ್ತುವಾರಿಗಳು:
ಫೈನಾನ್ಸ್ ಸಮಿತಿ: ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಮಹೀದ್ ಎಂ. ಹೆಚ್. ಮರಿಕ್ಕಳ, ಕೆ. ಪಿ. ಅಬ್ದುಲ್ಲಾ ಪೆರಡೆ (ಪುತ್ತುಞಿ).
ಆಹಾರ ವಿಭಾಗ:ಮುಹಮ್ಮದ್ ಮದನಿ ಸಾಮಣಿಗೆ, ಪುತ್ತು ಮೋರ್ಲ, ಅಶ್ರಫ್ ನೆಕ್ಕರೆ.
ಸೌಂಡ್ಸ್ & ಲೈಟಿಂಗ್ಸ್: ಶೌಕತ್ ಹಾಜಿ ದೇರಳಕಟ್ಟೆ.
ಸಂದಲ್ ಸಮಿತಿ: ಬಾವುಚ್ಚ ಅನ್ಸಾರ್ ನಗರ, ಲತೀಫ್ ಸುಬ್ಬಗೋಳಿ, ಹನೀಫ್ ಮೀನಂಕೋಡಿ.
ಪ್ರಚಾರ ಸಮಿತಿ:ಪಡಿಕ್ಕಲ್ ಅಬೂಬಕರ್ ಮದನಿ, ಅಬ್ದುರ್ರಹ್ಮಾನ್ ಮದನಿ ನೆಕ್ಕರೆ, ಎಂ. ಎಂ. ಕೆ. ಮುಡಿಪು.
ಸ್ವಯಂಸೇವಕ ದಳ:ಆಸಿಫ್ ಅನ್ಸಾರ್ ನಗರ, ಬಶೀರ್ ಮೋರ್ಲ.
ಸಭೆಯಲ್ಲಿ ಅಬೂಸ್ವಾಲಿಹ್ ಅಝ್ಹರಿ ಸ್ವಾಗತಿಸಿ, ಅಮಾನ್ ಮರ್ಝೂಖಿ ವಂದಿಸಿದರು. ನಾಡಿನ ವಿದ್ವತ್ ಪುರುಷರು ಹಾಗೂ ಸಾದಾತುಗಳ ನೇತೃತ್ವದಲ್ಲಿ ನಡೆಯಲಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಸಮಿತಿಯು ವಿನಂತಿಸಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ