janadhvani

Kannada Online News Paper

ಕಿನ್ಯಾ ಗೋಲ್ಡನ್ ಹೆಲ್ತ್ ಫೌಂಡೇಶನ್: ಏ.5 ರಂದು ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸಭಾಧ್ಯಕ್ಷರಾದ ಡಾ. ಯು. ಟಿ. ಖಾದರ್ ಅವರು ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.

ಕಿನ್ಯ: ಸಮಾಜದ ಹಿತದೃಷ್ಟಿಯಿಂದ ಕಳೆದ ಐದು ವರ್ಷಗಳಿಂದ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳನ್ನು ನೀಡುತ್ತಾ ಬಂದಿರುವ ಗೋಲ್ಡನ್ ಹೆಲ್ತ್ ಫೌಂಡೇಶನ್ (ರಿ) ಕಿನ್ಯ, ಈಗ ತನ್ನ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಂಸ್ಥೆಯು ತನ್ನ ಆರನೇ ವರ್ಷದ ಸಂಭ್ರಮದ ಅಂಗವಾಗಿ, ಕಿನ್ಯ ಗ್ರಾಮದಲ್ಲಿ ಸುಸಜ್ಜಿತವಾದ “ಗ್ರಾಮೀಣ ದತ್ತಿ ಆರೋಗ್ಯ ಕೇಂದ್ರ” (Charitable Rural Health Center) ನಿರ್ಮಾಣಕ್ಕೆ ಮುಂದಾಗಿದೆ.

ಸಂಸ್ಥೆಯ ಸ್ವಂತ ನಿವೇಶನದಲ್ಲಿ ನಿರ್ಮಾಣವಾಗಲಿರುವ ಈ ನೂತನ ಸುಸಜ್ಜಿತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು 05 ಏಪ್ರಿಲ್ 2026, ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಕಿನ್ಯದ ಕೇಂದ್ರ ಜುಮಾ ಮಸೀದಿ ಹತ್ತಿರವಿರುವ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಶಿಲಾನ್ಯಾಸ ಮತ್ತು ಕಾರ್ಯಕ್ರಮದ ಉದ್ಘಾಟನೆ:
ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸಭಾಧ್ಯಕ್ಷರಾದ ಡಾ. ಯು. ಟಿ. ಖಾದರ್ ಅವರು ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಸನ್ಮಾನ್ಯ ಡಾ. ಹಾಜಿ ಯು. ಕೆ. ಮೋನು ಕಣಚೂರು ನೆರವೇರಿಸಲಿದ್ದಾರೆ. ಗೋಲ್ಡನ್ ಹೆಲ್ತ್ ಫೌಂಡೇಶನ್ ಅಧ್ಯಕ್ಷರಾದ ಜನಾಬ್ ಹಾಜಿ ಮೂಸಾ ಅಬ್ಬಾಸ್ ಕುರಿಯಕ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಹು| ಮುಸ್ತಫಾ ಅನ್ಸಾರಿ ಅವರು ದುವಾ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ. ಯು.ಟಿ. ಇಫ್ತಿಕಾರ್ ಫರೀದ್ (ಅಧ್ಯಕ್ಷರು, ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್), ಹಾಜಿ ಕೆ.ಎಸ್. ಶೇಖ್ ಕರ್ನಿರೆ (CEO, ಎಕ್ಸ್‌ಪರ್ಟೈಸ್ ಕಂಪನಿ), ಯೇನಪೋಯ ಮುಹಮ್ಮದ್ ಫರ್ಹಾದ್ (ಪ್ರೊ ಚಾನ್ಸಲರ್, ಯೇನಪೋಯ ವಿವಿ), ಹಾಜಿ M. ಶರೀಫ್ ಬೋಳಾರ್ (CEO, White Stone, AI – Jubail, KSA), ಹಾಜಿ H. N. ಅಬ್ದುಲ್ ಹಮೀದ್ (ಮಾಲಕರು, H.N. ಗ್ರೂಪ್, ಮಂಗಳೂರು), ಹಾಜಿ P. S. ಮೊಯ್ದಿನ್ ಕುಂಞಿ ನಾಟಿಕಲ್ (Vice Chairman, Kunil Ilm Academy, Natekal), ಜನಾಬ್ ಅಬ್ದುಲ್ ರಹಿಮಾನ್ ಕಣಚೂರು (ನಿರ್ದೇಶಕರು, ಕಣಚೂರು ಮೆಡಿಕಲ್ ಕಾಲೇಜು), ಹಾಜಿ ಅಬೂಸಾಲಿಹ್ ಕುರಿಯಕ್ಕಾರ್ (ಅಧ್ಯಕ್ಷರು, ಕೇಂದ್ರ ಜುಮಾ ಮಸೀದಿ, ಕಿನ್ಯ), ಹಾಜಿ ಅಬ್ದುಲ್ ಅಝೀಝ್ (ಮೈಸೂರು ಬಾವಾ) (ಅಧ್ಯಕ್ಷರು, ಕೇಂದ್ರ ಜುಮಾ ಮಸೀದಿ, ಮಂಜನಾಡಿ), ಜನಾಬ್ U. B. ಮುಹಮ್ಮದ್ ಉಳ್ಳಾಲ (ಸುಲ್ತಾನ್ ಬಿಲ್ಡರ್ಸ್, ಮಂಗಳೂರು), ಶ್ರೀ ರಮೇಶ್ ಶೆಟ್ಟಿ ಬೋಳಿಯಾರ್ (ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಉಳ್ಳಾಲ), ಜನಾಬ್ ರೂಹಿದ್ ಮಲಾರ್ (ಅಧ್ಯಕ್ಷರು, SDPI, ಮಂಗಳೂರು ವಿಧಾನಸಭಾ ಕ್ಷೇತ್ರ), ಹಾಜಿ ಅಲಿಕುಂಞಿ ಪಾರೆ (ಗೌರವ ಸಲಹೆಗಾರರು, ಗೋಲ್ಡನ್ ಹೆಲ್ತ್ ಫೌಂಡೇಶನ್, ಕಿನ್ಯ), ಹಾಜಿ K.C. ಇಸ್ಮಾಯಿಲ್ ಚಾಯರವಳಚ್ಚಿಲ್ (ಗೌರವ ಸಲಹೆಗಾರರು, ಗೋಲ್ಡನ್ ಹೆಲ್ತ್ ಫೌಂಡೇಶನ್, ಕಿನ್ಯ), ಹಾಜಿ N. K. ಮುಹಮ್ಮದ್ ಕಿನ್ಯ (ಗೌರವ ಸಲಹೆಗಾರರು, ಗೋಲ್ಡನ್ ಹೆಲ್ತ್ ಫೌಂಡೇಶನ್, ಕಿನ್ಯ), ಹಾಜಿ M.A. ಮುಹಮ್ಮದ್ ಬಶೀರ್ (ಹಿರಿಯ ಸಾಮಾಜಿಕ ಮುಖಂಡರು, ಕಿನ್ಯ), ಶ್ರೀ ರವಿ ಪೂಜಾರಿ (ಪ್ರಧಾನ ಅರ್ಚಕರು, ಮಲಯರಾಯ ದೇವಸ್ಥಾನ, ಕಿನ್ಯ), ಸಿಸ್ಟರ್ ಐಲೀನ್ ಮಥಾಯಸ್ (ಪ್ರಧಾನ ಕಾರ್ಯ ನಿರ್ವಾಹಕರು, ಒಲವಿನ ಹಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರ, ಕಿನ್ಯ) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಸನ್ಮಾನ ಕಾರ್ಯಕ್ರಮ:
ಇದೇ ಸಂದರ್ಭದಲ್ಲಿ ವೈದ್ಯಕೀಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಡಾ. ಮುಹಮ್ಮದ್ ಇಕ್ಬಾಲ್ ಕಿನ್ಯ (ಜಿಲ್ಲಾ ಅಧಿಕಾರಿ, ಆಯುಷ್ ಇಲಾಖೆ ಉಡುಪಿ), ಡಾ. ರಾಮ್ ಪ್ರಕಾಶ್ MD (ಖ್ಯಾತ ವೈದ್ಯಕೀಯ ತಜ್ಞರು, ಮಂಗಳೂರು) ಮತ್ತು ಡಾ. ಅಫ್ರಾ ಇಸ್ಮಾಯಿಲ್ ಕಿನ್ಯ MS (OBG) ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.

ಜನಾಬ್ ಅಬ್ದುಲ್ ಸಮದ್ ಕಿನ್ಯ(ಪ್ರ. ಕಾರ್ಯದರ್ಶಿ ಗೋಲ್ಡನ್ ಹೆಲ್ತ್ ಫೌಂಡೇಶನ್ ಕಿನ್ಯಾ) ಅವರು ಸ್ವಾಗತಿಸಲಿದ್ದು, ಜನಾಬ್ ಹಮೀದ್ ಕಿನ್ಯ(ಸಂಚಾಲಕರು, ಗೋಲ್ಡನ್ ಹೆಲ್ತ್ ಫೌಂಡೇಶನ್ ಕಿನ್ಯ) ಕಾರ್ಯಕ್ರಮ ನಿರೂಪಿಸಲಿದ್ದಾರೆ. ಜನಾಬ್ ಅಬ್ದುಲ್ ಖಾದರ್ ಹಳೆಮನೆ(ಜೊತೆ ಕಾರ್ಯದರ್ಶಿ, ಗೋಲ್ಡನ್ ಹೆಲ್ತ್ ಫೌಂಡೇಶನ್ ಕಿನ್ಯ) ಧನ್ಯವಾದಗಳನ್ನು ಸಲ್ಲಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹಿನ್ನೆಲೆ ಮತ್ತು ಉದ್ದೇಶ:
ಗೋಲ್ಡನ್ ಹೆಲ್ತ್ ಫೌಂಡೇಶನ್ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದೆ. ಸ್ಥಳೀಯ ಜನರಿಗೆ ಆರೋಗ್ಯ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಈ ನೂತನ ಕಟ್ಟಡ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿದ್ದಾರೆ.

ಇದನ್ನೂ ಓದಿರಿ...