ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ಅಲ್ ಖೋಬರ್ ಘಟಕದ ವತಿಯಿಂದ ರಮಳಾನ್ ಮೀಟ್ ದಿನಾಂಕ 28, ಫೆಬ್ರವರಿ 2026 ಶನಿವಾರ ಮುಸ್ಸಂಜೆ ಅಲ್ ಖೋಬರ್ ಗಲ್ಫ್ ದರ್ಬಾರ್ ರೆಸ್ಟೋರೆಂಟ್ ನಲ್ಲಿ ನಡೆಯಿತು.
ಉಸ್ತಾದ್ ಉಸ್ಮಾನ್ ಸಅದಿ ನೆಲ್ಯಾಡಿ ಪ್ರಾರ್ಥನೆ ಗೈದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಿಕೆಯಸ್ಸಿ ಅಲ್ ಖೋಬರ್ ಘಟಕದ ಅಧ್ಯಕ್ಷ ಉಸ್ಮಾನ್ ಹೊಸಂಗಡಿ ಮಾತನಾಡುತ್ತಾ ಡಿಕೆಯಸ್ಸಿಯ ಅಭಿವೃಧ್ಧಿ ಕಾರ್ಯಗಳಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ರವರು ಪ್ರಸಕ್ತ ನಮ್ಮ ಮುಂದಿರುವ ಡಿಕೆಯಸ್ಸಿ ಯೋಜನೆಗಳ ಬಗ್ಗೆ ವಿವರಿಸಿದರು.


ರಮಳಾನ್ ನಲ್ಲಿ ಡಿಕೆಯಸ್ಸಿಗಾಗಿ ಪ್ರವರ್ತನೆ, ಮುಡಿಪು ಪ್ರದೇಶದಲ್ಲಿ ಡಿಕೆಯಸ್ಸಿಯ ಮುಂದಿನ ಯೋಜನೆಗಾಗಿ ಸ್ಥಳ ಖರೀದಿ ಬಗ್ಗೆ ಹಾಗೂ ಊರಿನಲ್ಲಿ ಮರ್ಕಝ್ ನ
ಖರ್ಚು ವೆಚ್ಚಕ್ಕಾಗಿ ಮಾಸಿಕ ವಾಗಿ ನೀಡುವ ಉಸ್ರತುಲ್ ಇಹ್ಸಾನ್ ಪದ್ದತಿ ಬಗ್ಗೆ ವಿವರಣೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿಕೆಯಸ್ಸಿ ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್ ರವರು ವಿಶೇಷವಾಗಿ ಯುವ ಸದಸ್ಯರು ಡಿಕೆಯಸ್ಸಿಯೊಂದಿಗೆ ಕೈ ಜೋಡಿಸುವ ಮೂಲಕ ಅದರ ಅಭಿವೃಧ್ಧಿಗೆ ದುಡಿದು ಬಲಪಡಿಸಬೇಕೆಂದು ವಿನಂತಿಸಿದರು.


ಕಾರ್ಯಕ್ರಮದ ಪ್ರಾರಂಭದಲ್ಲಿ ಮಾಷ್ಟರ್ ಮುಹಮ್ಮದ್ ಶಹೀಂ ಇಬ್ನ್ ಅಬ್ದುರ್ರಶೀದ್ ಬೆಳ್ಳಾರೆ ಸೂರ: ಫಾತಿಹ ಪಠಿಸಿದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ಡಿಕೆಯಸ್ಸಿ ಹಿತೈಷಿ ಅನ್ವರ್ ಸಾದಾತ್, ಉಸ್ತಾದ್ ಮೂಸಾ ಝುಹ್ರಿ, ಡಿಕೆಯಸ್ಸಿ ದಮ್ಮಾಂ ಘಟಕದ ಅಧ್ಯಕ್ಷ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ತುಖ್ಬ ಘಟಕದ ಅಧ್ಯಕ್ಷ ಮುಹಮ್ಮದ್ ಹನೀಫ್ ಜೆಪ್ಪು, ದಮ್ಮಾಂ ವಲಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ಸಭೆಯಲ್ಲಿ ಉಪಸ್ಥಿತರಿದ್ದರು.
ಡಿಕೆಯಸ್ಸಿ ದಮ್ಮಾಂ ಅಧೀನ ಕ್ಕೊಳಪಟ್ಟ ಅಲ್ ಖೋಬರ್, ದಮ್ಮಾಂ, ಹಾಗೂ ತುಖ್ಬ ಘಟಕದ ಸದಸ್ಯರು ಹಾಜರಿದ್ದರು.
ಪ್ರಾರಂಭದಲ್ಲಿ ಘಟಕದ ಹಣಕಾಸು ಕಾರ್ಯದರ್ಶಿ ಅಶ್ರಫ್ ಚಿಕ್ಕ ಮಗಳೂರು ಸ್ವಾಗತಿಸಿ,
ಕೊನೆಯಲ್ಲಿ ಡಿಕೆಯಸ್ಸಿ ಅಲ್ ಖೋಬರ್ ಘಟಕದ ಉಪಾಧ್ಯಕ್ಷ ಮುಹಮ್ಮದ್ ಮಲೆಬೆಟ್ಟು ಧನ್ಯವಾದ ಅರ್ಪಿಸಿದರು. ಡಿಕೆಯಸ್ಸಿ ಮೀಡಿಯಾ ವಿಂಗ್ ಮುಖ್ಯಸ್ಥ ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ