janadhvani

Kannada Online News Paper

ಕುಂಬ್ರ ಮರ್ಕಝುಲ್ ಹುದಾ : ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ

ಪುತ್ತೂರು : ರಾಜ್ಯದ ಪ್ರತಿಷ್ಠಿತ ಮಹಿಳಾ ಶಿಕ್ಷಣ ಸಂಸ್ಥೆ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸಂಸ್ಥೆಯ ಅಧ್ಯಕ್ಷ ಪಿ.ಎಂ. ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಉಸ್ತಾದ್ ಯು. ಕೆ. ಮುಹಮ್ಮದ್ ಸಅದಿ ವಳವೂರು ಕಾರ್ಯಕ್ರಮ ಉಧ್ಘಾಟಿಸಿದರು.

ಮುಂದಿನ ಸಾಲಿನ ಸಲಹಾ ಸಮಿತಿ ಮತ್ತು ಪದಾಧಿಕಾರಿಗಳನ್ನು ಕೆಳಗಿನಂತೆ ಆರಿಸಲಾಯಿತು

ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ (ಮುಖ್ಯ ಪೋಷಕರು)

ಖುದ್ವತುಸ್ಸಾದಾತ್ ಸಯ್ಯಿದ್ ಕೆ.ಎಸ್.ಆಟ್ಟಕ್ಕೋಯ ತಂಙಳ್ ಕುಂಬೋಲ್ (ಮುಖ್ಯ ಸಲಹೆಗಾರರು)

ಉಸ್ತಾದ್ ಸಿ. ಮುಹಮ್ಮದ್ ಫೈಝಿ, ಡಾ.ಅಬ್ದುಲ್ ಹಕೀಮ್ ಅಝ್‌ಹರೀ (ಸಲಹೆಗಾರರು)

ಹಾಜಿ ಪಿ.ಎಂ.ಅಬ್ದುಲ್ ರಹ್ಮಾನ್ ಅರಿಯಡ್ಕ (ಅಧ್ಯಕ್ಷರು)

ಡಾ.ಎಮ್ಮೆಸ್ಸೆಂ.ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ (ಕಾರ್ಯಾಧ್ಯಕ್ಷರು)

ಹಾಜಿ ಮುಹಮ್ಮದ್ ಬಶೀರ್ ಇಂದ್ರಾಜೆ (ಪ್ರಧಾನ ಕಾರ್ಯದರ್ಶಿ)

ಬಿ ಕೆ ಅಬ್ದುಲ್ ರಶೀದ್ ಸಂಪ್ಯ, ಯೂಸುಫ್ ಮೈದಾನಿಮೂಲೆ (ಕಾರ್ಯದರ್ಶಿಗಳು)

ಯೂಸುಫ್ ಗೌಸಿಯಾ ಸಾಜಾ,

(ಕೋಶಾಧಿಕಾರಿ)

ಶಂಸುದ್ದೀನ್ ಬೈರಿಕಟ್ಟೆ,

(ಓವರ್ಸೀಸ್ ಸೆಕ್ರೆಟರಿ)

ಸದಸ್ಯರಾಗಿ:

ಬಿ.ಕೆ. ಮುಹಮ್ಮದ್ ಅಲಿ ಫೈಝಿ ಸಂಪ್ಯ (ಬಾಳೆಪುಣಿ ಉಸ್ತಾದ್),

ಯೂಸುಫ್ ಹಾಜಿ ಕೈಕಾರ್,

ಆಶಿಖುದ್ದೀನ್ ಅಖ್ತರ್ ಕುಂಬ್ರ,

ಹಾಜಿ ಅನ್ವರ್ ಹುಸೈನ್ ಗೂಡಿನಬಳಿ,

ಹಾಜಿ ಅಬ್ದುಲ್ ಕರೀಂ ಕಾವೇರಿ, ಖಮರುದ್ದೀನ್ ಗೂಡಿನಬಳಿ,

ಕೆ.ಎಂ.ಮುಸ್ತಫಾ ಸುಳ್ಯ,

ಎಂ.ಎಸ್. ಮುಹಮ್ಮದ್ ವಿಟ್ಲ, ಹಾಜಿ ಕೆ.ಎಂ. ಮುಹಮ್ಮದ್ ಅಲಿ ಸುಂಟಿಕೊಪ್ಪ, ಇವರನ್ನು ಆರಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಬಷೀರ್ ಹಾಜಿ ಇಂದ್ರಾಜೆ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಅನಿವಾಸಿ ಘಟಕಗಳ (ಓವರ್ಸೀಸ್) ಕಾರ್ಯದರ್ಶಿ ಶಂಸುದ್ದೀನ್ ಬೈರಿಕಟ್ಟೆ, ದಮ್ಮಾಮ್ ಶುಭ ಹಾರೈಸಿದರು

ಕಾರ್ಯದರ್ಶಿ ಬಿಕೆ ರಶೀದ್ ಸಂಪ್ಯ ಸ್ವಾಗತಿಸಿ ಬಶೀರ್ ಹಾಜಿ ಇಂದ್ರಾಜೆ ಧನ್ಯವಾದ ಸಲ್ಲಿಸಿದರು