janadhvani

Kannada Online News Paper

ಕಾಞಂಗಾಡ್ : 60 ನೇ ವಾರ್ಷಿಕ ಬೃಹತ್ ರಾತೀಬ್ ಹಾಗೂ ಬುರ್ದಾ ಮಜ್ಲಿಸ್ ಅಕ್ಟೋಬರ್ 18, 19 ಕ್ಕೆ

ಕಾಞಂಗಾಡ್: ಖ್ಯಾತ ಸೂಫಿವರ್ಯರೂ, ಆಧ್ಯಾತ್ಮ ನಾಯಕರೂ ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಮರ್ಹೂಮ್ ಶೈಖುನಾ ಸಿ.ಪಿ. ಮಹಮ್ಮದ್ ಕುಂಞಿ ಮುಸ್ಲಿಯಾರ್ ರವರು ಪ್ರತ್ಯೇಕ ಇಜಾಝತ್ (ಅನುಮತಿ) ಪ್ರಕಾರ ತಮ್ಮ ಕಾಞಂಗಾಡ್ , ಹಳೆ ಕಡಪುರದ ‘ಗೌಸಿಯಾ ಮಂಝಿಲ್’ ನಲ್ಲಿ ವರ್ಷಂಪ್ರತಿ ರಬೀಉಲ್ ಆಖಿರ್ ತಿಂಗಳಲ್ಲಿ ನಡೆಸಿಕೊಂಡು ಬರುತ್ತಿದ್ದ, ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಆಗಿದೆ “ರಾತೀಬುಲ್ ಗೌಸಿಯತುಲ್ ಖಾದಿರಿಯ-ಜಲಾಲಿಯ ದಿಕ್ರ್ ಹಲ್ಕ”. ಶೈಖುನಾ ತಾಜುಲ್ ಉಲಾಮಾ ಸಹಿತ ಅನೇಕ ವಿದ್ವತ್ ಪುರುಷರು, ಸಾದಾತುಗಳು ನಿರಂತರ ಭಾಗವಹಿಸುತ್ತಿದ್ದ ; ಆಧ್ಯಾತ್ಮಿಕ ಮಹತ್ವವುಳ್ಳ, ಪ್ರಾರ್ಥನೆಗೆ ಉತ್ತರ ಲಭ್ಯವಿರುವ, ಉದ್ದೇಶ ಸಾಫಲ್ಯದ ಅನೇಕ ನಿದರ್ಶನಗಳಿರುವ ವಿಶೇಷ ಮಜ್ಲಿಸಿದು. ಉಸ್ತಾದರ ವಫಾತ್ ಬಳಿಕವೂ ಮಶಾಯಿಕ್ ಗಳ ಪರಂಪರಾಗತ ರೂಢಿಯಂತೆ ಇಂದಿಗೂ ಈ ಮಜ್ಲಿಸನ್ನು ಉಸ್ತಾದರ ಮಕ್ಕಳು ಹಾಗೂ ಕುಟುಂಬಸ್ಥರು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಈ ವರ್ಷ 60ನೇ ವರ್ಷದ ಮಜ್ಲಿಸ್ ಆಗಿದ್ದು: ಇದೇ ಅಕ್ಟೋಬರ್ 18 ಮತ್ತು 19 ನೇ ದಿನಾಂಕಗಳಲ್ಲಿ ಆಯೋಜಿಸಲಾಗಿದೆ. ಅ. 18 ರಂದು ಮಗ್ರಿಬ್ ನಮಾಜಿನ ನಂತರ; ಖ್ಯಾತ ಬುರ್ದಾ ಪ್ರಕೀರ್ತಕರಾದ ಹಾಫಿಲ್ ಝೈನುಲ್ ಆಬಿದ್ ಸಖಾಫಿ ಮಂಬುರಂ ಇವರ ತಂಡದ ನೇತೃತದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ಅ.19 ರಂದು ಮಗ್ರಿಬ್ ಬಳಿಕ ನಡೆಯುವ ‘ರಾತೀಬುಲ್ ಗೌಸಿಯತುಲ್ ಖಾದಿರಿಯ್ಯ ಜಲಾಲಿಯ ದಿಕ್ರ್ ಹಲ್ಕ’ ದ ನೇತೃತ್ವವನ್ನು ರೂಹುಸ್ಸಾದಾತ್ ಅಸ್ಸಯ್ಯಿದ್ ಅಬ್ದುಲ್ ಖಾದಿರ್ ಹೈದ್ರೋಸಿ ಮುತ್ತು ಕೋಯ (ಎಲಂಗೂರು ತಂಗಳ್) ವಹಿಸಲಿದ್ದಾರೆ.

ಉಸ್ತಾದರ ಶಿಷ್ಯಂದಿರು, ಅಭಿಮಾನಿಗಳು, ದೀನೀ ಪ್ರೇಮಿಗಳನ್ನು ಈ ಅಧ್ಯಾತ್ಮ ಕಾರ್ಯಕ್ರಮಕ್ಕೆ ಸ್ವಾಗತ ಸಮಿತಿ ಆಹ್ವಾನಿಸಿದ್ದು, ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಏರ್ಪಡಿಸಿದೆ.