ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಕರ್ ಗಳ ಹಾವಳಿ ದೈನಂದಿನ ಏರಿಕೆಯಾಗುತ್ತಿದ್ದು, ಒಂದಲ್ಲೊಂದು ರೀತಿಯ ಸಂದೇಶಗಳನ್ನು, ಲಿಂಕ್‌ಗಳನ್ನು ಹಂಚುವ ಮೂಲಕ ಬ್ಯಾಂಕ್ ಬಳಕೆದಾರರ ಖಾತೆಯಿಂದ ಹಣ ಲೂಟಿಮಾಡುವುದು ಅವರ ಮುಖ್ಯ ಗುರಿಯಾಗಿದೆ.
ತಮಗೆ ಬ್ಯಾಂಕ್ ನಿಂದ ಬಹುಮಾನ ಲಭಿಸಿದೆ, ರಿವಾರ್ಡ್ ಪಾಯಿಂಟ್‌ಗಳ ಮೂಲಕ ಇಂತಿಷ್ಟು ಮೊತ್ತ ದೊರೆಯಲಿದೆ ಎಂಬಿತ್ಯಾದಿ ಸಂದೇಶಗಳನ್ನು ಕಳಿಸಿ ಗ್ರಾಹಕರನ್ನು ಕಬಳಿಸುತ್ತಿದ್ದಾರೆ.
ಇದೀಗ, SBI ಬ್ಯಾಂಕ್ ನ ಹೆಸರಿನಲ್ಲಿ ರಿವಾರ್ಡ್ ಪಾಯಿಂಟ್‌ಗಳು ಎಂಬ ಸಂದೇಶದೊಂದಿಗೆ ವಾಟ್ಸಾಪ್ ಹ್ಯಾಕ್ ಮೊಬೈಲ್ ಅಪ್ಲಿಕೇಷನ್ ಒಂದು ಹರಿದಾಡುತ್ತಿದ್ದು, ಆ ಅಪ್ಲಿಕೇಷನ ನ್ನು ತಮ್ಮ ಮೊಬೈಲ್ ನಲ್ಲಿ ಇನ್ಷ್ಟಾಲ್ ಮಾಡಿದ ಕೂಡಲೇ ತಮ್ಮ ವಾಟ್ಸಾಪನ್ನು ಹ್ಯಾಕ್ ಮಾಡಲಾಗುತ್ತದೆ.
ಈಗಾಗಲೇ ಹಲವು ಮಂದಿಯ ವಾಟ್ಸಾಪ್ ಹ್ಯಾಕ್ ಆಗಿರುವ ಬಗ್ಗೆ ವರದಿಗಳು ಬಂದಿದ್ದು, ವಾಟ್ಸಾಪ್ ಗ್ರಾಹಕರು ಅಂತಹ ಯಾವುದೇ ಲಿಂಕ್ ಅಥವಾ ಮೊಬೈಲ್ ಆ್ಯಪ್ ಗಳನ್ನು ಕ್ಲಿಕ್ ಮಾಡದಂತೆ ಜಾಗರೂಕರಾಗಬೇಕಾಗಿದೆ.
ಒಮ್ಮೆ ಲಿಂಕನ್ನು ಕ್ಲಿಕ್ ಮಾಡಿದರೆ ತಮ್ಮ ವಾಟ್ಸಾಪ್ ಖಾತೆಯ ಸಂಪೂರ್ಣ ನಿಯಂತ್ರಣವು ಹ್ಯಾಕರ್ಗಳ ಪಾಲಾಗುತ್ತದೆ. ತಮ್ಮ ಕಾಂಟಾಕ್ಟ್ ನಲ್ಲಿರುವ ಎಲ್ಲರಿಗೂ ಈ ಸಂದೇಶ ರವಾನೆಯಾಗುತ್ತದೆ. ಮತ್ತೆ ತಮ್ಮ ಖಾತೆಯನ್ನು ಪಡೆಯಲು ಹರಸಾಹಸ ಪಡಬೇಕಾದೀತು. ಅದೂ ಅಲ್ಲದೇ, ತಮ್ಮ ಮೊಬೈಲ್ ನಲ್ಲಿ ರುವ ಬ್ಯಾಂಕ್ ಆ್ಯಪ್ ಗಳನ್ನೂ ಹ್ಯಾಕ್ ಮಾಡುವ ಸಾಧ್ಯತೆಯಿದೆ.
ಈ ರೀತಿ ಹ್ಯಾಕ್ ಆಗಿರುವ ಬಗ್ಗೆ ತಮಗೆ ಅರಿವಾದಲ್ಲಿ, ಮೊಬೈಲಿನಲ್ಲಿರುವ ಸಿಮ್ ಕಾರ್ಡ್ ನ್ನು ರಿಮೂವ್ ಮಾಡಿ, ಹ್ಯಾಕರ್ ಗಳಿಗೆ OTP ಲಭಿಸುವುದನ್ನು ತಡೆಯಬಹುದು. ಮತ್ತೆ ಮೊಬೈಲನ್ನು ಫಾರ್ಮ್ಯಾಟ್ ಮಾಡುವುದು ಉತ್ತಮವಾಗಿದೆ. ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿರುವ ಬಗ್ಗೆ ಸಂಶಯವಿದ್ದಲ್ಲಿ, ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗೆ ಮಾಹಿತಿ ನೀಡಬೇಕಾಗಿದೆ.
ಇಂಗ್ಲೀಷಿನಲ್ಲಿ ಹರಿದಾಡುತ್ತಿರುವ ಸಂದೇಶ ಈ ಕೆಳಗಿನಂತಿದೆ.


“ಆತ್ಮೀಯ ಮೌಲ್ಯದ ಗ್ರಾಹಕರೇ,
ನಿಮ್ಮ SBI ಬ್ಯಾಂಕ್ ರಿವಾರ್ಡ್ ಪಾಯಿಂಟ್‌ಗಳು (ರೂ. 9980.00) ಇಂದು ಮುಕ್ತಾಯಗೊಳ್ಳುತ್ತವೆ! ಈಗ SBI ಬ್ಯಾಂಕ್ ರಿವಾರ್ಡ್ ಅಪ್ಲಿಕೇಶನ್ ಮೂಲಕ ರಿಡೀಮ್ ಮಾಡಿಕೊಳ್ಳಿ ನಿಮ್ಮ ಖಾತೆಯಲ್ಲಿ ನಗದು ಠೇವಣಿ ಮಾಡುವ ಮೂಲಕ ಸ್ಥಾಪಿಸಿ ಮತ್ತು ನಿಮ್ಮ ಬಹುಮಾನವನ್ನು ಪಡೆದುಕೊಳ್ಳಿ. ಧನ್ಯವಾದಗಳು
ತಂಡ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ”
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ