ಮಂಗಳೂರು: ಕೊಳತ್ತಮಜಲಿನಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ರಹೀಂ ಮನೆಗೆ ಕರ್ನಾಟಕ ವಕ್ಫ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಆವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ನೀಡಿದರು. ಇದೇ ವೇಳೆ ವಕ್ಫ್ ಕೌನ್ಸಿಲ್ ಅಧ್ಯಕ್ಷರಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರಿಂದ ವೈಯಕ್ತಿಕವಾಗಿ 50 ಲಕ್ಷ ರೂ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾಗಿ ಕುಟುಂಬಕ್ಕೆ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ 50 ಲಕ್ಷ ರೂಪಾಯಿ ರಹೀಂ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವುದರ ಬಗ್ಗೆ ಮನೆ ಮಂದಿಗೆ ಖುದ್ದಾಗಿ ತಿಳಿಸುವ ಜವಾಬ್ದಾರಿಯೊಂದಿಗೆ ಶಾಫಿ ಸಅದಿ ನೇತೃತ್ವದಲ್ಲಿ ವಕ್ಫ್ ಮಂಡಳಿ ನಾಯಕರು ಮತ್ತು ಉಲಮಾ ನಾಯಕರ ನಿಯೋಗ ಭೇಟಿ ನೀಡಿದೆ.
ನಿಯೋಗದಲ್ಲಿ ವಕ್ಫ್ ಕೌನ್ಸಿಲ್ ಸದಸ್ಯರಾದ ಅನೀಸ್ ಕೌಸರಿ,ವಕ್ಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿಎ ನಾಸಿರ್ ಲಕ್ಕಿ ಸ್ಟಾರ್ , ಚಿಕ್ಕಮಂಗಳೂರು ವಕ್ಫ್ ಅಧ್ಯಕ್ಷ ಸಾಹಿದ್ ರಝ್ವಿ , ಉಡುಪಿ ಜಿಲ್ಲಾ ಅಧ್ಯಕ್ಷರು ಸಿ ಹೆಚ್ ಅಬ್ದುಲ್ ಮುತ್ತಲಿಬ್ ವಂಡ್ಸೆ, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಮ್ ಮೋಂಟುಗೊಳಿ, ಕೋಶಾಧಿಕಾರಿ ಮನ್ಸೂರ್ ಕೋಟು ಗದ್ದೆ, ಕೆ.ಸಿ.ಎಫ್ ರಾಷ್ಟೀಯ ನಾಯಕ ಹಂಝ ಮೈಂದಾಳ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸಅದಿ ಮಲ್ಲೂರು, ಅಶ್ರಫ್ ಕಿನಾರ, ಎಸ್ ವೈ ಎಸ್ ನಾಯಕರಾದ ಅಡ್ವೊಕೇಟ್ ಹಂಝತ್ , ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಹಸೈನಾರ್ ಆನೆಮಹಲ್ , ಬದ್ರುದ್ದೀನ್ ಅಝ್ಝರಿ, ಸತ್ತಾರ್ ಸಖಾಫಿ , ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ , ನವಾಝ್ ಸಖಾಫಿ ಅಡ್ಯಾರ್ ಪದವು, ರಿಯಾಝ್ ಸಅದಿ , ಎಸ್ ಎಸ್ ಎಫ್ ರಾಜ್ಯ ಕೋಶಾಧಿಕಾರಿ ಇರ್ಷಾದ್ ಹಾಜಿ ಗೂಡೀನಬಳಿ, ರಷೀದ್ ವಗ್ಗ, ನಜೀಬ್ ಕೈಕಂಬ, ಅಬೂಬಕ್ಕರ್ ಸಿದ್ದೀಕ್ ಕಾಜೂರು, ಅಬ್ದುರ್ರಹ್ಮಾನ್ ಮೊಗರ್ಪನೆ, ಸೈದುದ್ದೀನ್ , ರಝಾಕ್ ಭಾರತ್, ಹಬೀಬ್ ಅಡ್ಡೂರು, ಸ್ಥಳೀಯ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ , ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಅಬೂಬಕ್ಕರ್ ಸಜಿಪ, ಬಶೀರ್ ಕೈಕಂಬ , ಆಸೀಪ್ ಸ ಅದಿ ಕೈಕಂಬ ಸಹಿತ ಹಲವು ನಾಯಕರು ಉಪಸ್ಥಿತರಿದ್ದರು.
ಈ ಬಗ್ಗೆ ಶಾಫಿ ಸಅದಿಯವರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ತಿಳಿಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಅಮಾಯಕ ಅಬ್ದುಲ್ ರಹೀಂ ಕೊಳ್ತಮಜಲು ರವರ ಮನೆಗೆ ಮಾನ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಕ್ಫ್ ಸಚಿವರಾದ B.Z Zameer Ahmed Khan ತುರ್ತಾಗಿ ನನ್ನನ್ನು ಅವರ ಮನೆಗೆ ವಕ್ಫ್ ನಿಯೋಗದೊಂದಿಗೆ ಭೇಟಿ ನೀಡಲು , ಘಟನೆಯೊಂದಿಗಿನ ಅವರ ನೋವು ಮತ್ತು ದುಃಖವನ್ನು ವ್ಯಕ್ತಪಡಿಸಲು ಕಳುಹಿಸಿಕೊಟ್ಟಿದ್ದರು. ಅಬ್ದುಲ್ ರಹೀಂ ಕಾರ್ಯದರ್ಶಿಯಾಗಿದ್ದ ಸ್ಥಳೀಯ ಕೊಳ್ತಮಜಲು ಜುಮ್ಮಾ ಮಸೀದಿಯಲ್ಲೂ ಘಟನೆಯ ಬಗ್ಗೆ ನೋವು ಮತ್ತು ದುಃಖ ವ್ಯಕ್ತಪಡಿಸಿ ಮಗ್ಫಿರತ್ಗಾಗಿ ಪ್ರಾರ್ಥಿಸಿದೆನು.
ಬಳಿಕ ರಹೀಂ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಸುದೀರ್ಘವಾಗಿ ಮಾತನಾಡಿ ಪ್ರಾರ್ಥಿಸಿದೆನು. ಸನ್ಮಾನ್ಯ ಸಚಿವರೊಂದಿಗೆ ಸರ್ಕಾರದ ಸಹಾಯ ಬೇಡಿಕೆಯೊಂದಿಗೆ , ವೈಯಕ್ತಿಕವಾದ ಸಹಕಾರವೊಂದು ಬೇಡಿಕೆಯಿಟ್ಟಿದ್ದೆ. ಸನ್ಮಾನ್ಯ ಸಚಿವರು ನನ್ನ ನಿರೀಕ್ಷೆಯನ್ನೂ ಮೀರಿ 50ಲಕ್ಷ ಸ್ವಂತ ಹಣ ಆ ಕುಟುಂಬಕ್ಕೆ ವೈಯಕ್ತಿಕವಾಗಿ ನೀಡುವ ಭರವಸೆ ನೀಡಿದ್ದು, ಈ ಭೇಟಿಯಲ್ಲಿ ಕುಟುಂಬದೊಂದಿಗೆ ಆ ಸಂದೇಶವನ್ನೂ ಹಂಚಿಕೊಳ್ಳಲು ಕಳುಹಿಸಿಕೊಟ್ಟಿದ್ದರು.
ಯಾವತ್ತೂ ಸಮುದಾಯದ ಪರ ನಿಲ್ಲುವ ಜಮೀರ್ ಅಹಮದ್ ರ ಈ ವಾಗ್ದಾನ ಅವರ ಬಗ್ಗೆ ಮತ್ತಷ್ಟು ಗೌರವ ಹೆಚ್ಚಿಸಿದೆ. ಶೀಘ್ರದಲ್ಲೇ ಈ ಸಹಾಯದೊಂದಿಗೆ ಮನೆಗೆ ಭೇಟಿ ನೀಡುವ ಭರವಸೆಯೂ ನೀಡಿದ್ದಾರೆ. ರಾಜ್ಯಾದ್ಯಂತ ಇರುವ ಮುಸ್ಲಿಂ ಸಮಾಜದ ಪರವಾಗಿ , ಅನ್ಯಾಯದ ವಿರುದ್ದದ ಧ್ವನಿಯಾಗಿ , ಸಾಂತ್ವನವಾಗಿ ಈ ಭರವಸೆಯನ್ನು ಹೃದಯಾಂತರಾಳದಿಂದ ಅಭಿನಂದನೆಗಳು ಸಲ್ಲಿಸುತ್ತೇನೆ. ಸಮುದಾಯದ ಪರವಾಗಿ ಗೌರವವನ್ನೂ ಸಲ್ಲಿಸುತ್ತೇನೆ. ಈ ಭರವಸೆ ಶೀಘ್ರವಾಗಿ ಪೂರೈಸಲು ಪ್ರಾರ್ಥಿಸುತ್ತೇನೆ.
Moulana N K M Shafi Sa’adi
ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ