janadhvani

Kannada Online News Paper

ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ

ನವದೆಹಲಿ(ಜೂ.28): ಡಾಲರ್​ ಹೋಲಿಕೆಯಲ್ಲಿ ರೂಪಾಯಿ ಮೌಲ್ಯವು ಈವರೆಗಿನ ದಾಖಲೆಯಲ್ಲಿ ಅತ್ಯಂತ ಹೆಚ್ಚು ಕುಸಿತ ಕಂಡಿದೆ. ನಿನ್ನೆ 68.61 ರೂಪಾಯಿಗೆ ನಿಂತಿದ್ದ ರೂಪಾಯಿ ಮೌಲ್ಯ, ಬೆಳಗ್ಗೆ 28 ಪೈಸೆ ಕುಸಿತದೊಂದಿಗೆ 68.87 ರೂಪಾಯಿ ಮೌಲ್ಯದೊಂದಿಗೆ ಇಂದಿನ ವಹಿವಾಟು ಆರಂಭವಾಗಿದೆ. ಸದ್ಯ ರೂಪಾಯಿ ಮೌಲ್ಯವು ಪ್ರತಿ ಡಾಲರ್​ಗೆ 69.10 ಮಟ್ಟಕ್ಕಿಳಿದಿದೆ. ಈ ಮೂಲಕ ಇಂದಿನ ವಹಿವಾಟಿನಲ್ಲಿ ಡಾಲರ್​ ಹೋಲಿಕೆಯಲ್ಲಿ 49 ಪೈಸೆಯ ಭಾರೀ ಕುಸಿತ ಕಂಡಿದೆ.

ಡಾಲರ್​ ಮೌಲ್ಯ ಏರಿಕೆಯಾಗುತ್ತಿರುವುದರಿಂದ ರೂಪಾಯಿ ಮೇಲೆ ಒತ್ತಡ ಹೆಚ್ಚಾಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ರೂಪಾಯಿ ಮೇಲೆ ದುಪ್ಪಟ್ಟು ಒತ್ತಡ ಬೀಳುತ್ತಿದೆ. ಈ ವರ್ಷ ರೂಪಾಯಿಯು ಶೇ. 8ಕ್ಕೂ ಅಧಿಕ ಕುಸಿತ ಕಂಡಿದೆ. ಹೀಗಾಗಿ ದೇಶದಲ್ಲಿ ಹಣದುಬ್ಬರವಾಗುವ ಸಾಧ್ಯತೆಗಳಿವೆ.

ರೂಪಾಯಿ ಮೌಲ್ಯ ಕುಸಿಯಲು ಕಾರಣವೇನು?

ಅಮೆರಿಕಾ ಹಾಗೂ ಚೀನಾ ನಡುವೆ ವ್ಯಾಪಾರ ಯುದ್ಧವೇರ್ಪಡುವ ಆತಂಕ ಏರ್ಪಟ್ಟಿತ್ತು. ಹೀಗಾಗಿ ಭಾರತೀಯ ರೂಪಾಯಿ ಮೇಲೆ ಒತ್ತಡ ಬೀಳಲಾರಂಭಿಸಿತ್ತು. ಇದನ್ನು ಹೊರತುಪಡಿಸಿ ತಿಂಗಳ ಅಂತ್ಯದಲ್ಲಿ ತೈಲ ವ್ಯಾಪಾರ ಕಂಪೆನಿಗಳಾದ(HPCL, IOC, BPCL)ನಿಂದ ಡಾಲರ್​ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ತಿಂಗಳ ಅಂತ್ಯದಲ್ಲಿ ರೂಪಾಯಿ ಮೌಲ್ಯ ಕುಸಿತ ಕಾಣುತ್ತದೆ.

ಈ ವರ್ಷ ಶೇ. 8 ರಷ್ಟು ಕುಸಿತ ಕಂಡ ರೂಪಾಯಿ: ಕಳೆದ ವರ್ಷ ಡಾಲರ್ ಹೋಲಿಕೆಯಲ್ಲಿ ರೂಪಾಯಿ ಮೌಲ್ಯವು 5.96 ಕುಸಿತ ಕಂಡಿದ್ದು, ಈ ವರ್ಷ ಇದು ಗಣನೀಯವಾಗಿ ಕುಸಿಯಲಾರಂಭಿಸಿದೆ. ಈ ವರ್ಷ ಸರಿ ಸುಮಾರು ಸೇ. 8 ರಷ್ಟಿಉ ಕುಸಿದಿದೆ. ಇದಕ್ಕೂ ಮೊದಲು 2016 ರ ನವೆಂಬರ್ 24ರಂದು ಪ್ರತಿ ಡಾಲರ್​ಗೆ, 68.68 ರೂಪಾಯಿಯೊಂದಿಗೆ ಐತಿಹಾಸಿಕ ಕುಸಿತ ಕಂಡಿತ್ತು. ಈ ಹಿಂದೆ 2013 ರಲ್ಲಿ 68.80ರೊಂದಿಗೆ ಈವರೆಗಿನ ಅತ್ಯಂತ ಹೆಚ್ಚಿನ ಕುಸಿತ ದಾಖಲಾಗಿತ್ತು.

ಜನಸಾಮಾನ್ಯರ ಮೇಲಾಗುವ ಪರಿಣಾಮವೇನು?

  • ಭಾರತ ತನಗೆ ಅಗತ್ಯವಿರುವ ಸುಮಾರು 80 ಶೇಕಡಾ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.
  • ರೂಪಾಯಿ ಮೌಲ್ಯ ಕುಸಿತದಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದು ದುಬಾರಿಯಾಗಲಿದೆ.
  • ತೈಲ ಕಂಪೆನಿಗಳು ದೇಶದಲ್ಲಿ ಪೆಟ್ರೋಲ್​- ಡೀಸೆಲ್​ಗಳ ಬೆಲೆ ಏರಿಸುವ ಸಾಧ್ಯತೆಗಳಿವೆ.
  • ಡಿಸೇಲ್ ಬೆಲೆ ಏರಿಕೆಯಿಂದ ಸಾರಿಕೆಯಲ್ಲಿ ಹೆಚ್ಚಳವಾಗುತ್ತದೆ, ಈ ಮೂಲಕ ಹಣದುಬ್ಬರವಾಗುವ ಸಾಧ್ಯತೆಗಳಿವೆ.
  • ಇದನ್ನು ಹೊರತುಪಡಿಸಿ ಭಾರತವು ಬೃಹತ್ ಪ್ರಮಾಣದಲ್ಲಿ ಖಾದ್ಯ ತೈಲ ಹಾಗೂ ಧಾನ್ಯಗಳನ್ನೂ ಆಮದು ಮಾಡಿಕೊಳ್ಳುತ್ತದೆ.
  • ರೂಪಾಯಿ ಮೌಲ್ಯ ಕುಸಿತದಿಂದ ದೇಶೀ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಹಾಗೂ ದಾಣ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.

error: Content is protected !! Not allowed copy content from janadhvani.com