ಮದೀನಾ ಮುನವ್ವರ: ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಕರ್ನಾಟಕದಿಂದ ಬಂದ ಹಜ್ಜಾಜಿಗಳ ಮೊದಲ ವಿಮಾನವು ಮದೀನಾ ಮುನವ್ವರದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಝೀಝ್ ಇಂಟರ್ನ್ಯಾಷನಲ್ ಏರ್ಪೋರ್ಟ್ ತಲುಪಿದೆ. ಬೆಳಗ್ಗಿನ ಜಾವ 378 ಹಾಜಿಗಳು ಆಗಮಿಸಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಹಜ್ಜ್ ವಾಲೇಂಟಿಯರ್ ಕೋರ್ (HVC) ಸದಸ್ಯರು ಹಜ್ಜಾಜಿಗಳನ್ನು ಬರಮಾಡಿಕೊಂಡರು. ಹಜ್ಜಾಜಿಗಳು ತಂಗುವ ಹೋಟೆಲ್ ಗೆ ತೆರಳಿ ನೀರು ಹಾಗೂ ಲಘು ಉಪಹಾರ ನೀಡುವ ಮೂಲಕ ಸ್ವಾಗತಿಸಿದರು.



ಅಶಕ್ತ ಹಜ್ಜಾಜಿಗಳನ್ನು ವೀಲ್ ಚೇರ್ ಮೂಲಕ ಹೋಟೆಲ್ ಗೆ ತಲುಪಿಸಿದ್ದು, ಅಗತ್ಯವಿರುವ ಹಾಜಿಗಳಿಗೆ ಸಿಮ್ ಕಾರ್ಡ್ ಪಡೆಯಲು ಸಹಕರಿಸಿದರು.
ರಾಜ್ಯದಿಂದ 956 ಹಜ್ಜಾಜಿಗಳು ಇಂದು ಮದೀನಾ ಮುನವ್ವರ ತಲುಪಲಿದ್ದು, 289 ಹಾಜಿಗಳು ಮಧ್ಯಾಹ್ನ ವೇಳೆ, ಹಾಗೂ ಸಂಜೆ 289 ಹಾಜಿಗಳು ಪವಿತ್ರ ನಗರ ತಲುಪಲಿದ್ದಾರೆ. ಕರ್ನಾಟಕದಿಂದ ಆಗಮಿಸುತ್ತಿರುವ ಹಜ್ಜಾಜಿಗಳ ಎಲ್ಲಾ ಅಗತ್ಯಗಳಿಗೆ ಸ್ಪಂದಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಹಜ್ಜ್ ವಾಲೆಂಟಿಯರ್ ಕೋರ್ ಸದಸ್ಯರು ತಯಾರಾಗಿದ್ದು, ದಿನದ 24 ಗಂಟೆಗಳ ಕಾಲ ಅಗತ್ಯ ಸೇವೆಗಳಿಗೆ ಕಾರ್ಯನಿರತರಾಗಿರುತ್ತಾರೆ.
ವರದಿ : ಹಕೀಂ ಬೋಳಾರ್
















ಇನ್ನಷ್ಟು ಸುದ್ದಿಗಳು
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ