janadhvani

Kannada Online News Paper

ಸೌದಿ: ಮಹಿಳಾ ಚಾಲಕರಿಂದ ರಸ್ತೆಗಿಳಿದ ವಾಹನ: ಪ್ರಮುಖ ರಸ್ತೆಗಳಲ್ಲಿ ಮುನ್ನೆಚ್ಚರಿಕಾ ಮಾಹಿತಿ ಅಳವಡಿಕೆ

ಮದೀನಾ: ಹೊಸತಾಗಿ ವಾಹನ ಚಲಾಯಿಸಲು ಅನುಮತಿ ಪಡೆದ ಸೌದಿ ಮಹಿಳೆಯರು ಸಿದ್ಧತೆಗಳನ್ನು ನಡೆಸಿರುವಾಗ ಸೌದಿ ಟ್ರಾಫಿಕ್ ವಿಭಾಗವು ಎಲ್ಲಾ ತಯಾರಿಯೂ ಪೂರ್ಣಗೊಂಡಿರುವುದಾಗಿ ಘೋಷಿಸಿದೆ.

ಪ್ರಮುಖ ರಸ್ತೆಗಳಲ್ಲಿ ಮುನ್ನೆಚ್ಚರಿಕೆ ಮಾಹಿತಿಯನ್ನು ಅಳವಡಿಸಲಾಗಿದೆ.ತರಬೇತಿ ಪಡೆದ ಸುಮಾರು 40 ಮಹಿಳಾ ಸಂಚಾರೀ ಪೊಲೀಸರು ಉದ್ಯೋಗದಲ್ಲಿ ಪ್ರವೇಶಿಸಿದ್ದಾರೆ. ಮಹಿಳೆಯರು ವಾಹನ ಚಲಾಯಿಸುವ ಕಾರಣಕ್ಕಾಗಿ, ತರಬೇತಿ ಪಡೆದ ಮಹಿಳೆಯರಿಗೆ ಸಂಚಾರ ಅಪಘಾತಗಳನ್ನು ತಡೆಯಲು ವಿಶೇಷ ತರಬೇತಿ ನೀಡಲಾಗಿದೆ. ವಿಮಾ ಕಂಪನಿಯಾದ ನಜ್ಮಾನ್ ತರಬೇತಿ ನೀಡಿದೆ.

ವಿವಿಧ ಚಾಲನಾ ತರಬೇತಿ ಶಾಲೆಗಳಲ್ಲಿ ತರಬೇತಿಗಾಗಿ ಸಾವಿರಾರು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ದಮಾಮ್ನಲ್ಲಿನ ಇಮಾಮ್ ಅಬ್ದುರಹ್ಮಾನ್ ಬಿನ್ ಫೈಸಲ್ ವಿಶ್ವವಿದ್ಯಾನಿಲಯದ ಡ್ರೈವಿಂಗ್ ಶಾಲೆಯಲ್ಲಿ ಮಾತ್ರ 13,000 ಕ್ಕಿಂತ ಹೆಚ್ಚು ಮಹಿಳೆಯರು ನೋಂದಾಯಿಸಿದ್ದಾರೆ.

ಸಂಚಾರೀ ಕಾನೂನು ಉಲ್ಲಂಘನೆಯ ಸಂದರ್ಭದಲ್ಲಿ ಮಹಿಳೆಯರು ಯಾವುದೇ ರಿಯಾಯಿತಿಗಳನ್ನು ಹೊಂದಿರುವುದಿಲ್ಲ. ಕಾನೂನು ಉಲ್ಲಂಘನೆಗಾರರ ವಿರುದ್ಧ ಪ್ರಕರಣಗಳು ದಾಖಲಿಸಲಾಗುವುದು.ವಾಹನ ಅಪಘಾತದಲ್ಲಿ ಸಾವು ಸಂಭವಿಸಿದರೆ ಅಥವಾ ಗಾಯಾಲುವಿನ ಚಿಕಿತ್ಸೆಯು 15 ದಿನಗಳವರೆಗೆ ದೀರ್ಘಗೊಂಡರೆ ಚಾಲಕನನ್ನು ಬಂಧಿಸಲಾಗುತ್ತದೆ.

ಈ ತಿಂಗಳ 24ರಿಂದ ಮಹಿಳೆಯರು ಚಾಲನೆ ಮಾಡಬಹುದು ಎಂದು ಸಲ್ಮಾನ್ ರಾಜಕುಮಾರ ಐತಿಹಾಸಿಕ ಘೋಷಣೆಯನ್ನು ಮಾಡಿದ್ದರು. ಇದರೊಂದಿಗೆ, 3,000 ಕ್ಕಿಂತಲೂ ಹೆಚ್ಚು ಮಹಿಳೆಯರು, ಇನಾಮ್ ಗಾಝಿಯಂತೆ ಕರೀಂ ಆನ್ಲೈನ್ ಟ್ಯಾಕ್ಸಿ ಕಂಪೆನಿಯ ಚಾಲಕರ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮಹಿಳಾ ಟ್ಯಾಕ್ಸಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅಂತಹ ವಾಹನಗಳನ್ನು ಕುಟುಂಬಗಳಿಗೆ ಮಾತ್ರ ಉಪಯೋಗಿಸಬಹುದು. ಚಾಲಕ ಸೌದಿಯಲ್ಲದಿರುವುದು, ಯಾತ್ರಿಕರು ಗಂಡಸರು ಮಾತ್ರವಾಗಿರುವುದು, ಅನುಮತಿ ರಹಿತ ವಲಯದಲ್ಲಿ ಚಲಾಯಿಸುವುದು ಕಂಡು ಬಂದರೆ 5,000 ರಿಯಾಲ್ ದಂಡ ವಿಧಿಸಲಾಗುವುದು. ಮುಂದಿನ ಆಸನದಲ್ಲಿ ಪುರುಷರು ಅಥವಾ ಮಕ್ಕಳು ಕುಳಿತುಕೊಳ್ಳುವಂತಿಲ್ಲ.

ಪ್ರಸ್ತಾವಿತ ದಿನಕ್ಕೆ ಮುಂಚಿತವಾಗಿ ಮಹಿಳೆಯರು ವಾಹನ  ಚಲಾಯಿಸಲು ಇಳಿದರೆ 500 ರಿಂದ 900 ರಿಯಾಲ್ ವರೆಗೆ ದಂಡ ಇರುತ್ತದೆ ಎಂದು ಟ್ರಾಫಿಕ್ ಡೈರೆಕ್ಟರೇಟ್ ಹೇಳಿಕೊಂಡಿದೆ. ವಾಹನವನ್ನು ಚಲಾಯಿಸಲು ಪರವಾನಗಿ ಹೊಂದಿಲ್ಲದವರಿಗೆ ಚಲಾಯಿಸಲು ವಾಹನವನ್ನು ನೀಡಿದರೆ 900 ರಿಯಾಲ್ ದಂಡವನ್ನು ಪಾವತಿಸಬೇಕಾದೀತು.

error: Content is protected !! Not allowed copy content from janadhvani.com