ಯಶಸ್ವಿಯಾಗಿ 4 ವರ್ಷ ಪೂರೈಸಿದ ಅಕ್ಷಯ ಬ್ಲಡ್ ಡೋನರ್ಸ್ ಇದರ 40ನೇ ರಕ್ತದಾನ ಶಿಬಿರವು ದಿನಾಂಕ:-16-02-2025 ನೇ ಭಾನುವಾರದಂದು ಝಕರಿಯಾ ನಾರ್ಶ ಇವರ ಅಧ್ಯಕ್ಷತೆಯಲ್ಲಿ ಎನ್ ಸಿ ರೋಡ್ ಸೀಗಲ್ ಟವರ್ ನಲ್ಲಿ ನಡೆಸಲಾಯಿತು. ಮಹಮ್ಮದ್ ಅಲಿ ಸಖಾಫಿ ದುಃಅ ನೆರವೇರಿಸಿದರು.
ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಇವರು ಕಾರ್ಯಕ್ರಮ ಉದ್ಘಾಟಿಸಿದರು. ರಕ್ತದಾನ ಶಿಬಿರದಲ್ಲಿ 79 ಮಂದಿ ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಕೆ ಪಿ ಸಿ ಸಿ ಕಾರ್ಯದರ್ಶಿ ಎಮ್ ಎಸ್ ಮಹಮ್ಮದ್, ಪಂಚಾಯತ್ ರಾಜ್ ಘಟಕದ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ , ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅಬ್ಬಾಸ್ ಆಲಿ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹೀಂ ಮಂಚಿ, ಬೊಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್, ಹಕೀಂ ಜೌಹರಿ, ಅಲ್ತಾಫ್ ಶಾಂತಿಭಾಗ್, ಸಮಾಜ ಸೇವಕ ಶಶಿಧರ ಕಾಡುಮಟ , ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಸಿ ಹೆಚ್ ರಝಾಕ್, ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಅನ್ಸಾರ್ ಬಿ.ಜಿ, ಅಶ್ರಫ್ ಸುರಿಬೈಲು, ಅಬ್ದುಲ್ ಖಾದರ್ ಕೊಕ್ಕಪುಣಿ, ಸೀಗಲ್ ಟವರ್ ಉಸ್ತುವಾರಿ ರಹೀಂ ಕುಡುಂಬಕೋಡಿ, ಮುನೀಸ್ ಬೊಳಂತೂರು, ಅನೀಸ್ ಬಿ ಜಿ ,ಎಸ್ ಎಂ ಎ ಬೊಳಂತೂರು ರೀಜನಲ್ ಕೋಶಾಧಿಕಾರಿ ಅಬ್ದುಲ್ಲಾ ನಾರಂಕೋಡಿ, ಸಲೀಂ ಕುಡುಂಬಕೋಡಿ , ಹಮೀದ್ ಕದ್ಕಾರ್, ಮಜೀದ್ ಕದ್ಕಾರ್ , ಆಸೀಫ್ ಬೈಲ್, ಹಾಗೂ ಹಮೀದ್ ಟೈಲರ್ ಅತಿಥಿಗಳಾಗಿ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ರವೂಫ್ ಬಂದರ್, ಎಸ್ ವೈ ಎಸ್ ರಾಜ್ಯ ಸಾಂತ್ವಾನ ಕಾರ್ಯದರ್ಶಿ ಇಬ್ರಾಹೀಂ ಕಲೀಲ್ ಬೊಳಂತೂರು, ಸುರಿಬೈಲ್ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ ಹಂಝ ಮಂಚಿ, ಬೊಳಂತೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಬಶೀರ್ ನಾರಂಕೋಡಿ, ಎಸ್ ವೈ ಎಸ್ ಬೊಳಂತೂರು ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ನಾರ್ಶ ಇವರ ಸೇವೆಯನ್ನು ಗುರುತಿಸಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ವತಿಯಿಂದ ಸನ್ಮಾನಿಸಲಾಯಿತು.
ನೌಫಲ್ ಕೆ ಬಿ ಕಾರ್ಯಕ್ರಮ ನಿರೂಪಿಸಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಇದರ ಸಂಚಾಲಕರಾದ ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ವಂದಿಸಿದರು.