ಉಪ್ಪಿನಂಗಡಿ: SჄS ಕೊಪ್ಪಳ ಯುನಿಟ್ ರಚನೆಗೊಂಡ ಬಳಿಕ ಮೊದಲ ಕಾರ್ಯಕ್ರಮವಾಗಿ ಮಲ್ಹರತುಲ್ ಬದ್ರಿಯ್ಯಾ ಹಾಗೂ ರಮಳಾನ್ ಪೂರ್ವ ಸಿದ್ಧತೆ ತರಗತಿಯನ್ನು ದಿನಾಂಕ 26.02.2024ರ ಬುಧವಾರ ಮಗ್ರಿಬ್ ನಮಾಜಿನ ನಂತರ ನಡೆಸಲಾಯಿತು.
ಅಬ್ದುಲ್ ರಝಾಕ್ ಸಖಾಫಿ ಕೊಪ್ಪಳ ಉಸ್ತಾದರ ದುವಾದೊಂದಿಗೆ ಸಿರಾಜುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಮಲ್ಹರತುಲ್ ಬದ್ರಿಯ್ಯಾ ನಡೆಯಿತು. ಅಬ್ದುಲ್ ರಝಾಕ್ ಸಖಾಫಿ ಉಸ್ತಾದರು ಸ್ವಾಗತಿಸಿದರು. ಸಿರಾಜುದ್ದೀನ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಬ್ದುಲ್ ರಶೀದ್ ಸಖಾಫಿ ಮಜೂರ್ ಉಸ್ತಾದರು ರಮಳಾನ್ ಪೂರ್ವ ಸಿದ್ಧತೆ ತರಗತಿ ನಡೆಸಿದರು.
ನಂತರ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಇದರ ಮುಫತ್ತಿಷರಾದ ಪೆರಿಯಡ್ಕ ಇಸ್ಮಾಯಿಲ್ ಉಸ್ತಾದರು ಹಿತವಚನ ನೀಡಿದರು.
ಉನ್ನತ ವಿದ್ಯಬ್ಯಾಸಕ್ಕಾಗಿ ಬಾಖಿಯಾತ್ ಸ್ವಾಲಿಹಾತ್ ಗೆ ತೆರಳುವ ನೌರೀಜ್ ಕೊಪ್ಪಳ ಹಾಗೂ ಮರ್ಕಝ್ ಗೆ ತೆರಳುವ ಸಿನಾನ್ ಕೊಪ್ಪಳ ಇವರನ್ನು SSF SჄS KMJ KCF ವತಿಯಿಂದ ಗೌರವಿಸಲಾಯಿತು.
ಕೊನೆಯದಾಗಿ ನಮ್ಮಿಂದ ಅಗಲಿದ ಊರಿನ ಎಲ್ಲರ ಮೇಲೆ ತಹ್ಲೀಲ್ ಹೇಳಿ ಮಜೂರ್ ಉಸ್ತಾದರು ದುವಾ ನೆರವೇರಿಸಿದರು.