ಕಾರ್ಕಳ : ನೂರುಲ್ ಹುದಾ ಜುಮ್ಮಾ ಮಸೀದಿ ಬಜಗೋಳಿ ಇದರ ಆಶ್ರಯ ಬೃಹತ್ ವಾರ್ಷಿಕ ಸ್ವಲಾತ್ ಹಾಗೂ ಆಧ್ಯಾತ್ಮಿಕ ಸಂಗಮ ನಾಳೆ (16/2) ಮಗ್ರಿಬ್ ನಮಾಝಿನ ನಂತರ ನೂರುಲ್ ಹುದಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸಿ.ಎಚ್ ಪುತ್ತಾಕ ಅವರ ಅಧ್ಯಕ್ಷತೆಯನ್ನು ಮುಹ್’ಯುದ್ದೀನ್ ಜುಮಾ ಮಸೀದಿ ನೆಲ್ಲಿಕಾರಿನ ಖತೀಬರಾದ ಮೌಲಾನ ಮುಹಮ್ಮದ್ ರಾಕಿಬ್ ಖಿರಾಅತ್’ನೊಂದಿಗೆ ಚಾಲನೆ ನೀಡಲಿದ್ದಾರೆ.
ಬಜಗೋಳಿ ಸಮಿತಿಯ ಗೌರವ ಅಧ್ಯಕ್ಷರಾದ
ಅಬ್ದುರಹ್ಮಾನ್ ಮುಸ್ಲಿಯಾರ್ ಬಜಗೋಳಿ ಸ್ವಾಗತ ಭಾಷಣ ಮತ್ತು ಮಸೀದಿ ಖತೀಬರಾದ ಅಬ್ಬುರಹ್ಮಾನ್ ಹುಮೈದಿ ಅಲ್‌ಅಸ್ ಅದಿ ಉದ್ಘಾಟನೆ ಹಾಗೂ ಅಬ್ದುಲ್ ಹಕೀಂ ಮದನಿ ಪಾಂಡವರಕಲ್ಲು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ವೇದಿಕೆಯಲ್ಲಿ ನೂರುಲ್ ಹುದಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರು ಹಾಜಿ ಹೆಚ್. ಸುಲೈಮಾನ್, ಅಬ್ದುಲ್ ಕಲಾಂ ಆಝಾದ್ ನ್ಯಾಶನಲ್ ಕನ್ ಸ್ಟ್ರಕ್ಷನ್ ತೀರ್ಥಹಳ್ಳಿ ಶಿವಮೊಗ್ಗ ಹಾಗೂ ಇನ್ನಿತರ ಉಲಮಾ ಹಾಗೂ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಕೋಶಾಧಿಕಾರಿ ಸ್ವಾದಿಕ್ ಬಜಗೋಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.